Rakshita Prem: ಚಿತ್ರರಂಗಕ್ಕೆ ಬಂದಾಗ ನಡೆದ ʻಆ ಘಟನೆʼ ನೆನೆದ ನಟಿ ರಕ್ಷಿತಾ ಪ್ರೇಮ್ !
ನಟಿ ರಕ್ಷಿತಾ ಪ್ರೇಮ್ ತಂದೆ ಬಿ.ಸಿ.ಗೌರಿಶಂಕರ್ ಕನ್ನಡದ ಫೇಮಸ್ ಕ್ಯಾಮರಾಮನ್ ಆಗಿದ್ದರು. ವೃತ್ತಿಜೀವನದಲ್ಲಿ ಅದ್ಭುತ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದವರು.
ಬಿ.ಸಿ.ಗೌರಿಶಂಕರ್ ಕೊನೆ ಕೊನೆಗೆ ಕೆಲಸ ಇಲ್ಲದೇ ಮನೆಯಲ್ಲಿ ಕೂರುವ ಸ್ಥಿತಿ ಬಂದಿತಂತೆ. ತಂದೆ ಸಿನಿರಂಗದಲ್ಲಿ ಇದ್ದಾಗಲೇ ಮಗಳು ರಕ್ಷಿತಾ ಕೂಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.
ರಕ್ಷಿತಾ ಮೊದಲ ಸಿನಿಮಾದಿಂದಲೇ ಹಿಟ್ ಪಡೆದರು. ಯಶಸ್ಸು ಗಳಿಸುತ್ತಲೇ ಹೋದರು. ಸಿನಿಮಾಗಳ ಆಫರ್ ಸಾಲು ಸಾಲಾಗಿ ಬರುತ್ತಿತ್ತು. ಡೇಟ್ಸ್ ಸಿಗದಷ್ಟು ಬ್ಯುಸಿಯಾಗಿ ಬಿಟ್ಟರು.
ಅತ್ತ ಮಗಳ ಕೀರ್ತಿ ಹೆಚ್ಚಾದಂತೆ ಇತ್ತ ತಂದೆಗೆ ಕೆಲಸವೇ ಸಿಗದಂತಾಯ್ತು. ಆಗ ಬಿ.ಸಿ.ಗೌರಿಶಂಕರ್ ಕೆಲಸ ಕೇಳಿದ್ರೆ ಒಂದು ಕಂಡಿಷನ್ ಹಾಕುತ್ತಿದ್ದರಂತೆ.
ನಿಮ್ಮ ಮಗಳ ಡೇಟ್ಸ್ ಕೊಡಿಸಿ ನಾವು ನಿಮಗೆ ಸಿನಿಮಾ ಕೊಡುತ್ತೇವೆ ಎಂದು ರಕ್ಷಿತಾ ತಂದೆ ಬಿ.ಸಿ.ಗೌರಿಶಂಕರ್ ಅವರಿಗೆ ಹೇಳುತ್ತಿದ್ದರಂತೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋದಲ್ಲಿ ರಕ್ಷಿತಾ ಪ್ರೇಮ್‌ಈ ಘಟನೆಯನ್ನು ನೆನೆದಿದ್ದಾರೆ. ತಮ್ಮ ತಂದೆ ಬಗ್ಗೆ ಹೇಳಿಕೊಂಡಿದ್ದಾರೆ.