Actress Ramya : ರಮ್ಯಾ 41 ವರ್ಷವಾದ್ರೂ ಮದುವೆ ಆಗದಿರಲು ಇದೇ ಕಾರಣ.!

Wed, 29 Nov 2023-3:08 pm,

ನಟಿ ರಮ್ಯಾಗೆ ಎಲ್ಲೇ ಹೋದರು ಎಲ್ಲರೂ ಕೇಳುವ ಪ್ರಶ್ನೆ ಒಂದೇ ಮದುವೆ ಯಾವಾಗ ಅಂತ. ಇದಕ್ಕೆ ಹಲವು ಬಾರಿ ರಮ್ಯಾ ಉತ್ತರಿಸಿದ್ದಾರೆ.  

ಸಿನಿಮಾ ತಯಾರಿಯಲ್ಲಿ ಬ್ಯುಸಿಯಿರುವ ನಟಿ ರಮ್ಯಾ 41 ವರ್ಷ ವಯಸ್ಸಾದರೂ ಯಾಕಿನ್ನೂ ಸಿಂಗಲ್‌ ಆಗಿದ್ದಾರೆ ಎಂಬುದು ಅವರ ಅಭಿಮಾನಿಗಳ ಆತಂಕ. 

ರಮ್ಯಾ ಸಿನಿಮಾ ಮಾತ್ರವಲ್ಲ ರಾಜಕೀಯದಲ್ಲೂ ಮಿಂಚಿದವರು. ಕೆಲ ಕಾಲ ಯಾರ ಕೈ ಗೂ ಸಿಗದೆ ವಿದೇಶದಲ್ಲಿ ನೆಲೆಸಿದ್ದರು.

ಇತ್ತೀಚೆಗೆ ಮತ್ತೆ ಕನ್ನಡ ಸಿನಿರಂಗಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ಇದೀಗ ಮತ್ತೆ ರಮ್ಯಾ ಮದುವೆ ಚರ್ಚೆ ಶುರುವಾಗಿದೆ.   

ಸಿನಿಮಾ, ರಾಜಕೀಯ ಎರಡರಲ್ಲೂ ಬ್ಯುಸಿಯಾಗಿರುವ ರಮ್ಯಾ ಸಮಯ ಕೊಡಲು ಸಾಧ್ಯವಾಗದ ಕಾರಣ ಮದುವೆಯಿಂದ ದೂರವಿರಬಹುದು ಎಂದು ಹೇಳುತ್ತಿದ್ದಾರೆ. 

ರಮ್ಯಾ ಈ ಹಿಂದೆ ಒಂದು ಕಾಲೇಜ್‌ ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಮಾತನಾಡಿದ್ದರು. ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಮದುವೆ ಯಾಕೋ ಆಗಬೇಕು ಎಂದಿದ್ದರು.

ಇದೇ ಕಾರ್ಯಕ್ರಮದಲ್ಲಿ ರಮ್ಯಾ, ಹ್ಯಾಪಿ ಆಗಿರೋದು ಅಥವಾ ಮದುವೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಅದಕ್ಕೆ ನಾನು ಸಂತೋಷವಾಗಿರುವುದನ್ನೆ ಆಯ್ಕೆ ಮಾಡುತ್ತೇನೆ ಎಂದಿದ್ದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link