ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮೊದಲ ಆಡಿಷನ್‌ ಹೇಗಿತ್ತು ಗೊತ್ತಾ? ಕನ್ನಡ ಮಾತಾಡೋಕೆ ಇಷ್ಟೊಂದು ಕಷ್ಟಪಡ್ತಾರಾ ನಟಿ! ವಿಡಿಯೋ ನೋಡಿ

Wed, 02 Oct 2024-2:42 pm,

ಸ್ಯಾಂಡಲ್‌ವುಡ್‌ ಮೂಲಕ ಸದ್ಯ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

 

ಇದನ್ನು ನೋಡಿ ಅನೇಕ ಕನ್ನಡಾಭಿಮಾನಿಗಳು ಸಿಟ್ಟಿಗೆದ್ದಿದ್ದು, ಇನ್ನೂ ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ.

 

ಅಂದಹಾಗೆ ನಟಿ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾ ಯಾವುದು ಅಂತ ಕೇಳಿದ್ರೆ ಕಿರಿಕ್ ಪಾರ್ಟಿ ಎಂದು ಹೇಳುತ್ತಾರೆ. ಆದರೆ ಉತ್ತರ ಅದಲ್ಲ... ರಶ್ಮಿಕಾ ಮಂದಣ್ಣ ಮೊದಲ ಚಿತ್ರದ ಹೆಸರು ಗೋಪಿಲೋಲ. ಆದರೆ ಈ ಚಿತ್ರಕ್ಕೆ ರಶ್ಮಿಕಾ ಸೆಲೆಕ್ಟ್‌ ಆಗ್ಲಿಲ್ವೋ? ಅಥವಾ  ಸಿನಿಮಾ ಲೇಟ್ ಆಯಿತೋ..? ಗೊತ್ತಿಲ್ಲ.

 

 ಇದೀಗ ಈ ಗೋಪಿಲೋಲ ಸಿನಿಮಾ ರಿಲೀಸ್ ಆಗುತ್ತಿರುವ ಸಮಯದಲ್ಲಿಯೇ ರಶ್ಮಿಕಾ ಮಂದಣ್ಣ ಆಡಿಷನ್ ವಿಡಿಯೋ ವೈರಲ್‌ ಆಗಿದೆ.

 

ಈ ವಿಡಿಯೋ ವೈರಲ್‌ ಆಗಿದ್ದೇ ತಡ, ಟ್ರೋಲ್ ವೀರರು ಇದನ್ನ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

 

ರಶ್ಮಿಕಾ ಮಂದಣ್ಣ ಈ ಆಡಿಷನ್‌ ಸಂದರ್ಭದಲ್ಲಿ ಡ್ಯಾನ್ಸ್ ಕೂಡ ಮಾಡಿದ್ದರು. ಒಂದು ಸಿನಿಮಾದ ಡೈಲಾಗ್ ಸಹ ಹೇಳಿದ್ದರು. ಜೊತೆಗೆ ತನ್ನ ಪರಿಚಯವನ್ನು ಮಾಡಿಕೊಂಡಿದ್ದ ರಶ್ಮಿಕಾ, ತಮ್ಮ 19 ನೇ ವಯಸ್ಸಿಗೆ ಆಡಿಷನ್ ಕೊಟ್ಟಿದ್ದಾರೆ.

 

ಆಡಿಷನ್‌ನಲ್ಲಿ ಕನ್ನಡ ಮಾತನಾಡಲು ಪರದಾಡಿರುವುದು ಕಂಡುಬರುತ್ತಿದೆ. ಅಂದಹಾಗೆ ಇದನ್ನು ಕೆಲವರು ಎಐ ಜನರೇಟೆಡ್‌ ವಿಡಿಯೋ ಎನ್ನುತ್ತಿದ್ದರೆ, ಇನ್ನೂ ಕೆಲವರು ಇದು ನಿಜ ಎಂದು ಹೇಳುತ್ತಿದ್ದಾರೆ. ಸತ್ಯಾಂಶ ಏನೂ ಎಂಬುದು ತಿಳಿದುಬಂದಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link