ನಟಿ ಸುಧಾರಾಣಿ ಮಗಳು ಕೂಡ ಫೇಮಸ್‌ ಕಲಾವಿದೆ.. ದೇವಲೋಕದ ಅಪ್ಸರೆಯಂತಿರುವ ಚೆಲುವೆ ಇವರೇ ನೋಡಿ

Wed, 14 Aug 2024-12:26 pm,

ಒಂದು ಕಾಲದಲ್ಲಿ ಸ್ಟಾರ್‌ ಹೀರೋಯಿನ್‌ ಆಗಿ ಸ್ಯಾಂಡಲ್‌ವುಡ್‌​ ಆಳಿದ ಸುಧಾರಾಣಿ, ಇದೀಗ ಕಿರುತೆರೆ ಮತ್ತು ಪೋಷಕ ಪಾತ್ರಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಇಷ್ಟು ವರ್ಷವಾದರೂ ನಟಿ ಸುಧಾರಾಣಿ ಅವರ ಬ್ಯೂಟಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. 

ಸುಧಾರಾಣಿ ಅವರ ಪುತ್ರಿ ಕೂಡ ಅಮ್ಮನಂತೆಯೇ ಸುಂದರವಾಗಿದ್ದಾರೆ. ದೇವಲೋಕದ ಅಪ್ಸರೆಯಂತೆ ಕಾಣುತ್ತಾರೆ. ಸುಧಾರಾಣಿ ಪುತ್ರಿಯ ಹೆಸರು ನಿಧಿ ರಾವ್‌. 

ನಟಿ ಸುಧಾರಾಣಿ ತಮ್ಮ ಮಗಳನ್ನು ಪ್ರೀತಿಯಿಂದ ಸುಬ್ಬಿಕುಟ್ಟಿ ಎಂದು ಕರೆಯುತ್ತಾರೆ. ನಿಧಿ ರಾವ್‌ ಫೋಟೋಗಳನ್ನು ಸುಧಾರಾಣಿ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. 

ಅಮ್ಮನಷ್ಟೇ ಚೆಲುವೆ ಆಗಿರುವ ಸುಧಾರಾಣಿಯ ಮಗಳು ನಿಧಿ ಕೂಡ ಫೇಮಸ್‌ ಕಲಾವಿದೆ ಆಗಿದ್ದಾರೆ. ಸುಧಾರಾಣಿ ಅವರಂತೆಯೇ ನಿಧಿ ಭರತನಾಟ್ಯ ಕಲಾವಿದೆಯಾಗಿದ್ದಾರೆ. ಈಗಾಗಲೇ ರಂಗಪ್ರವೇಶ ಮಾಡಿದ್ದಾರೆ.

ಭರತನಾಟ್ಯ ಮತ್ತು ಸಂಗೀತದಲ್ಲಿ ಪ್ರಾವಿಣ್ಯತೆ ಪಡೆದಿರುವ ನಿಧಿ, ನಟನೆಯಲ್ಲಿಯೂ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಒಳ್ಳೊಳ್ಳೆ ಸಿನಿಮಾ ಆಫರ್‌ ಬರುತ್ತಿದ್ದು, ಶೀಘ್ರದಲ್ಲೇ ನಟನೆಗೆ ಎಂಟ್ರಿಕೊಡಬಹುದು ಎನ್ನಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link