ನಿತ್ಯ ಕುಡಿಯುವ ಕಾಫಿಗೆ ಈ ಎಣ್ಣೆ ಬೆರೆಸಿ... ಕೇವಲ 10 ನಿಮಿಷದಲ್ಲಿ ಬಿಳಿಕೂದಲು ಶಾಶ್ವತವಾಗಿ ಬುಡದಿಂದಲೇ ಕಪ್ಪಾಗುತ್ತೆ!
ಕಾಫಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಶಾಂಪೂ, ಕಂಡೀಷನರ್ ಮತ್ತು ಸೀರಮ್’ಗೆ ಸಹ ಇದನ್ನು ಬಳಸಲಾಗುತ್ತದೆ. ಇನ್ನು ಕಾಫಿ ಹೇರ್ ಮಾಸ್ಕ್ ಅನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು
ಬಾಣಲೆಯಲ್ಲಿ 2 ಕಪ್ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ 1/4 ಕಪ್ ಹುರಿದ ಕಾಫಿ ಬೀಜಗಳನ್ನು ಸೇರಿಸಿ. ಸ್ವಲ್ಪ ಸಮಯದವರೆಗೆ ಕಡಿಮೆ ಉರಿಯಲ್ಲಿ ಕುದಿಸಿ. ನಂತರ ಸ್ಟವ್ ಆಫ್ ಮಾಡಿ. ಕಾಫಿ ಬೀಜಗಳನ್ನು ಬೇರ್ಪಡಿಸಲು ಎಣ್ಣೆಯನ್ನು ಫಿಲ್ಟರ್ ಮಾಡಿ. ನಂತರ ಅದನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿಡಿ. ಶಾಂಪೂ ಮಾಡುವ ಮೊದಲು ಈ ಎಣ್ಣೆಯಿಂದ ನೆತ್ತಿಗೆ ಮಸಾಜ್ ಮಾಡಿ. ಒಂದು ಗಂಟೆ ಕಾಲ ಹಾಗೆ ಬಿಡಿ. ಇದರ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
1 ಚಮಚ ಕಾಫಿ ಪುಡಿ ಮತ್ತು 2 ಚಮಚ ಕ್ಯಾಸ್ಟರ್ ಆಯಿಲ್ ತೆಗೆದುಕೊಳ್ಳಿ. ಒಟ್ಟಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. 30 ರಿಂದ 40 ನಿಮಿಷಗಳ ಕಾಲ ಬಿಡಿ. ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ವಿಧಾನವನ್ನು ಅನುಸರಿಸಬಹುದು.
1 ಚಮಚ ಕಾಫಿ ಪುಡಿ ಮತ್ತು 2 ಚಮಚ ಅಲೋವೆರಾ ಜೆಲ್ ತೆಗೆದುಕೊಳ್ಳಿ. ಒಟ್ಟಿಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ, 30 ರಿಂದ 40 ನಿಮಿಷಗಳ ಕಾಲ ಹಾಗೇ ಬಿಟ್ಟು, ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ಸಲಹೆ ಅನುಸರಿಸಬಹುದು.
ಅರ್ಧ ಕಪ್ ಸಾದಾ ಮೊಸರು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಕಾಫಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸಂಪೂರ್ಣ ನೆತ್ತಿಯ ಮೇಲೆ ಹಚ್ಚಿ. 30 ರಿಂದ 40 ನಿಮಿಷಗಳ ಕಾಲ ಹಾಗೇ ಬಿಡಿ. ಇದರ ನಂತರ ಶಾಂಪೂ ಬಳಸಿ ತೊಳೆಯಿರಿ.
ಒಂದು ಚಮಚ ಕಾಫಿ ಪುಡಿಯನ್ನು 2 ಚಮಚ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಮಾಸ್ಕ್ ತಯಾರಿಸಿ. ನಂತರ ಕೂದಲಿಗೆ ಹಚ್ಚಿ. 30-40 ನಿಮಿಷಗಳ ನಂತರ, ಶಾಂಪೂ ಬಳಸಿ ತೊಳೆಯಿರಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)