Adithi Prabhudeva: ಅಲೆಕ್ಸಾ ಏಂಜಲ್‌ಗೆ ಜನ್ಮದಿನದ ಖುಷಿ: ಅದಿತಿಗೆ ಪತಿಯ ವಿಶಸ್!
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವಗೆ ಜನವರಿ 13 ರಂದು 30ನೇ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಇತ್ತೀಚೆಗಷ್ಟೇ ಈ ನಟಿ ಅಮ್ಮ ಆಗ್ತಿರೋ ಗುಡ್‌ನ್ಯೂಸ್ ಕೊಟ್ಟಿದ್ದವರಿಗೆ, ಪತಿ ಯಶಸ್ ಅವರು ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಅದಿತಿ ಗಂಡ ಯಶಸ್ ʻನಿನ್ನನ್ನು ಪಡೆದಿರುವ ನಾನೇ ಧನ್ಯ. ನಾನು ಅದೃಷ್ಟಶಾಲಿ. ನಾನು ಯಾವಾಗಲೂ ನಿನ್ನ ದೊಡ್ಡ ಬೆಂಬಲಿಗನಾಗಿರುತ್ತೇನೆ. ಬದುಕಿನ ಈ ಪಯಣದಲ್ಲಿ ನನ್ನ ಬಾಳಸಂಗಾತಿಯಾಗಿ ಪಡೆದಿರುವುದಕ್ಕೆ ನನಗೆ ಖುಷಿಯಿದೆʼ ಎಂದು ಭಾವುಕವಾಗಿರುವ ಪೋಸ್ಟ ಶೇರ್ ಮಾಡಿದ್ದಾರೆ.
ಬೆಣ್ಣೆನಗರಿ ಸುಂದರಿ ಅದಿತಿಗೆ ಅವರ ಪತಿ ʻನೀನು ನಗುತ್ತಿರುವುದನ್ನು ನೋಡಿದಕ್ಕಿಂತ ನನಗೆ ಏನೂ ಸಂತೋಷವಿಲ್ಲ. ನಾವು ಮೊದಲು ಭೇಟಿಯಾದ ದಿನದಿಂದಲೂ ಇಂದಿನವರೆಗೂ ಕಳೆದಿರುವ ಕ್ಷಣಗಳು ಅಪೂರ್ವವಾಗಿದೆ. ನಮ್ಮ ಪ್ರೀತಿಯ ಉಡುಗೊರೆಯನ್ನು ನೀವು ಹೊತ್ತುಕೊಂಡಿರುವುದರಿಂದ ಇದು ವಿಶೇಷ ಜನ್ಮದಿನವಾಗಿದೆ ʼ ಎಂದು ಜನ್ಮದಿನಕ್ಕೆ ಶುಭ ಕೋರಿದ್ದಾರೆ.
ನಟಿ ಅದಿತಿ ಪ್ರಭುದೇವ ಇತ್ತೀಚೆಗೆ ಅಮ್ಮ ಆಗುವ ಖುಷಿಯ ವಿಷಯವನ್ನು ಹಂಚಿಕೊಂಡ ಇವರು, ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ" ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ನಟಿ ಅದಿತಿ ಪ್ರಭುದೇವ ಇತ್ತೀಚೆಗೆ ಅಮ್ಮ ಆಗುವ ಖುಷಿಯ ವಿಷಯವನ್ನು ಹಂಚಿಕೊಂಡ ಇವರು, ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ" ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ಅದಿತಿ ಪ್ರಭುದೇವ ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ ಅದಿತಿ ಅವರು ಸದ್ಯ ಅಲೆಕ್ಸಾ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ಚಂದನವನದ ಅಪ್ಪಟ ಕನ್ನಡತಿ ಅದಿತಿ ಸದ್ಯ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು.
ನಟಿ ಅದಿತಿ ಪ್ರಭುದೇವ ಕೂರ್ಗ್ ಮೂಲದ 2022ರ ನವೆಂಬರ್ 28ರಂದು ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಇದೀಗ ಅವರು ಅಮ್ಮ ಆಗುತ್ತಿದ್ದು, ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ನಟಿ, ಬ್ಯೂಟಿ, ಅಡುಗೆ ಮುಂತಾದವುಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.