Adithi Prabhudev: ಪ್ರಗ್ನೆನ್ಸಿ ಫೋಟೊಶೂಟ್: ಪುಟ್ಟ ಆಸೆ ಈಡೇರಿಸಕೊಂಡ ಅದಿತಿ..!!
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಸಂಪ್ರದಾಯಕ ಉಡುಗೆಯನ್ನು ತೊಟ್ಟಿಕೊಂಡು ತಮ್ಮ ಪತಿಯ ಜೊತೆಗ ವಿಭಿನ್ನವಾಗಿ ಫೋಟೊಶೂಟ್ ಮಾಡಿಸಿದ್ದಾರೆ.
ನಟಿ ಅದಿತಿ ಪ್ರಭುದೇವ ಸಂಪ್ರದಾಯಕವಾಗಿ ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಧರಿಸಿ, ಕೈಗಳಿಗೆ ಹಸಿರು ಗಾಜಿನ ಬಳೆಗಳನ್ನು ಹಾಕಿಕೊಂಡು, ತಲೆಯ ತುರುಬಿಗೆ ಮಲ್ಲಿಗೆ ಹೂವನ್ನು ಸುತ್ತಿಕೊಂಡು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಅದಿತಿ ಪ್ರಭುದೇವ ಜೊತೆಗೆ ಆಕೆಯ ಗಂಡ ಯಶಸ್ ಪಾಟ್ಲಾ ಬಿಳಿ ರೇಶ್ಮೆ ದೋತಿ ಶರ್ಟ್ ಹಾಗೂ ಕೆಂಪು ಬಣ್ಣದ ಶಲ್ಯ ಹಾಕಿಕೊಂಡು ದೊಡ್ಡ ಸ್ಟೇಟ್‌ಮೆಂಟ್ ಸರ ಧರಿಸಿದ್ದಾರೆ.
ಕನ್ನಡತಿ ಅದಿತಿ ಪ್ರಭುದೇವ ಕೊನೆಯ ತಿಂಗಳಲ್ಲಿ ಪ್ರಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡು ಇದನ್ನೂ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅದಿತಿ ಪ್ರಭುದೇವ ಹಾಗೂ ಯಶಸ್ ಪಾಟ್ಲಾ ಫೋಟೋಶೂಟ್ ಪೋಸ್ಟ್ ಕ್ಯಾಪ್ಶನ್‌ನಲ್ಲಿ "ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ ಆಗಿದೆ.
ಅದಿತಿ ಪ್ರಭುದೇವ ಫೋಟೋ ಪೋಸ್ಟ್‌ಗೆ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಈ ಫೋಟೊಶೂಟ್‌ಗೆ ಕೈ ಎತ್ತಿ ಮುಗಿಬೇಕು, ದೃಷ್ಟಿ ಆಗುತ್ತೆ ಕನ್ನಡತಿಗೆ, ಅಕ್ಕ ಯಾರ ದೃಷ್ಟಿ ಬಿಲ್ಧೆ ಇರಿಲಿ ನಿಮ್ ಮೇಲೆ, ಸೂಪರ್, ಮುದ್ದು ಬಂಗಾರಿ ಅಂತೆಲ್ಲಾ ಬರೆದಿದ್ದಾರೆ.