ADITYA L1 MISSION LAUNCH: ಸೂರ್ಯನ ಮೇಲೆ ಆದಿತ್ಯ ಲ್ಯಾಂಡ್ ಆಗುವುದೇ..?
Aditya L1 ಮಿಷನ್ ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ದೂರದಲ್ಲಿ ಸ್ಥಾಪನೆಯಾಗಲಿದೆ. ಆದಿತ್ಯ ಮಿಷನ್ ಕೆಲಸ ಮಾಡುವ ಸ್ಥಳದಿಂದ ಸೂರ್ಯನ ದೂರವು ಸುಮಾರು 14 ಕೋಟಿ ಕಿಮೀಯಾಗಿರುತ್ತದೆ.
Aditya L1 ಒಟ್ಟು 7 ಪೇಲೋಡ್‌ಗಳನ್ನು ಹೊಂದಿದ್ದು, ಇದರಲ್ಲಿ 4 ಪೇಲೋಡ್‌ಗಳು ಸೂರ್ಯನ ಕಿರಣಗಳನ್ನು ಅಧ್ಯಯನ ಮಾಡುತ್ತವೆ. 3 ಪೇಲೋಡ್‌ಗಳು ಮೇಲ್ಮೈಯನ್ನು ಅಧ್ಯಯನ ಮಾಡುತ್ತವೆ.
ಸೂರ್ಯನ ಹೊರ ಮೇಲ್ಮೈಯಿಂದ ಹೊರಹೊಮ್ಮುವ ಕಿರಣಗಳನ್ನು ಅಧ್ಯಯನ ಮಾಡುವ ಮೂಲಕ, ಸೂರ್ಯನ ಮಧ್ಯಭಾಗದಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಸಾಧ್ಯವಾಗುತ್ತದೆ. ಆದಿತ್ಯ ದ್ಯುತಿಗೋಳದಲ್ಲಿ ನಡೆಯುತ್ತಿರುವ ಅಸಾಮಾನ್ಯ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡುತ್ತಾನೆ.
Aditya L1 ಮಿಷನ್ ಸ್ಥಾಪಿಸುವ ಸ್ಥಳದಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯು ಪರಸ್ಪರ ಪ್ರಭಾವವನ್ನು ಶೂನ್ಯಗೊಳಿಸುತ್ತದೆ.
ಚಂದ್ರಯಾನ-3 ಮಿಷನ್‌ನ ಯಶಸ್ಸಿನ ನಂತರ ಪ್ರಪಂಚದ ಕಣ್ಣು ಇದೀಗ ಆದಿತ್ಯ L1 ಮಿಷನ್ ಮೇಲೆ ಬಿದ್ದಿದೆ. ಮಾಜಿ ISS ಕಮಾಂಡರ್ ಕ್ರಿಸ್ ಹ್ಯಾಡ್‌ಫೀಲ್ಡ್ ಇದು ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೆ ವಿಶೇಷವಾಗಿದೆ ಎಂದು ಹೇಳಿದ್ದಾರೆ.