ಸ್ಲಿಮ್ ಬೆಲ್ಲಿ ಪಡೆಯಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಬೆಲ್ಲಿ ಫ್ಯಾಟ್ ಕರಗಿಸಲು ನಿತ್ಯ ನಿಯಮಿತ ವ್ಯಾಯಾಮ, ವಾಕಿಂಗ್ ತುಂಬಾ ಅಗತ್ಯ. ನಿತ್ಯ ಕನಿಷ್ಠ ಅರ್ಧ ತಾಸಾದರೂ ವಾಕಿಂಗ್ ಮಾಡಿ.
ಪ್ರೋಟೀನ್ ಯುಕ್ತ ಆಹಾರಗಳು ಹೊಟ್ಟೆಯಲ್ಲಿ ಕೊಬ್ಬು ಶೇಖರಣೆ ಆಗುವುದನ್ನು ತಡೆಯುತ್ತವೆ. ಹಾಗಾಗಿ ನಿಮ್ಮ ದಿನಚರಿಯಲ್ಲಿ ಪ್ರೋಟೀನ್ ಹೆಚ್ಚಿರುವ ಆಹಾರಗಳನ್ನು ಸೇವಿಸಿ.
ನಿತ್ಯ ನಿಮ್ಮ ಆಹಾರದಲ್ಲಿ ತರಕಾರಿಗಳನ್ನು ತಪ್ಪದೇ ಸೇವಿಸಿ. ಇದರಿಂದ ತೂಕ ಕಡಿಮೆ ಆಗುವುದರ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳಿಂದಲೂ ದೂರ ಉಳಿಯಬಹುದು.
ನಿಮ್ಮ ದೇಹದ ತೂಕವನ್ನು ನಿಯಂತ್ರಿಸುವಲ್ಲಿ, ದೇಹವನ್ನು ಹೈಡ್ರೇಟ್ ಮಾಡುವಲ್ಲಿ ನೀರು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಿತ್ಯ ಸಾಕಷ್ಟು ನೀರು ಕುಡಿಯಿರಿ.
ನಿತ್ಯ ಕನಿಷ್ಠ 7 ಗಂಟೆಯಾದರೂ ನಿದ್ದೆ ಮಾಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.