ಚಿನ್ನದ ದರ ಇಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ !ದೊಡ್ಡ ಮಟ್ಟದಲ್ಲಿ ಕುಸಿಯುವುದು ಬಂಗಾರದ ಬೆಲೆ
ಇಡೀ ದೇಶದಲ್ಲಿ ಚಿನ್ನದ ದರ ಒಂದೇ ರೀತಿಯಾಗಿರುತ್ತದೆಯೇ ಎಂದು ಕೇಳಿದರೆ, ಅದಕ್ಕೆ ಉತ್ತರ ಖಂಡಿತಾ ಇಲ್ಲ. ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಜೈಪುರ, ಚಂಡೀಗಢ, ಲಕ್ನೋ, ನೋಯ್ಡಾ ಹೀಗೆ ಬೇರೆ ಬೇರೆ ನಗರಗಳ ಚಿನ್ನದ ದರಕ್ಕೆ ಹೋಲಿಸಿ ನೋಡಿದರೆ ಬೆಲೆಯಲ್ಲಿ ಭಾರೀ ವ್ಯತ್ಯಾಸ ಕಂಡು ಬರುತ್ತದೆ.
ಈ ನಿಟ್ಟಿನಲ್ಲಿ ‘ಒಂದು ರಾಷ್ಟ್ರ, ಒಂದು ಚಿನ್ನದ ದರ’(One nation one gold rate) ಜಾರಿಗೆ ತರುವ ಪ್ರಯತ್ನ ಬಹಳ ಹಿಂದಿನಿಂದಲೂ ನಡೆಯುತ್ತಿದೆ.ಚಿನ್ನದ ದರವನ್ನು ಪ್ರಮಾಣೀಕರಿಸುವ ಪ್ರಯತ್ನವಾಗಿ ಇದರ ಅನುಷ್ಠಾನವಾಗಲಿದೆ.
ಇದೀಗ 'ಒಂದು ರಾಷ್ಟ್ರ, ಒಂದು ಚಿನ್ನದ ದರ'ಕ್ಕೆ ಸಂಬಂಧಪಟ್ಟಂತೆ ಹೊಸ ಅಪ್ಡೇಟ್ ಆಲ್ ಇಂಡಿಯಾ ಜೆಮ್ಸ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಕಡೆಯಿಂದ ಬಂದಿದೆ.
ಎಲ್ಲ ರಾಜ್ಯಗಳಿಗೂ ಒಂದೇ ದರದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೂಕೂಡಾ ಬಂಗಾರದ ಬೆಲೆ ಪ್ರತೀ ನಗರಗಳಿಗೂ ಬದಲಾಗುತ್ತದೆ. ಹಾಗಾಗಿ ದೇಶಾದ್ಯಂತ ಚಿನ್ನಕ್ಕೆ ಒಂದೇ ಬೆಲೆ ಜಾರಿಯಾಗಬೇಕು ಎನ್ನುವ ಉದ್ದೇಶ ಜಿಜೆಸಿಯದ್ದು.
ಒಂದು ರಾಷ್ಟ್ರ, ಒಂದು ಚಿನ್ನದ ದರದ ಅನ್ವಯ ದೇಶಾದ್ಯಂತ ಚಿನ್ನಕ್ಕೆ ಒಂದೇ ಬೆಲೆ ಇರುವಂತೆ ಮಾಡುತ್ತದೆ. ಹೀಗಾದಾಗ ದೇಶದ ಯಾವ ಮೂಲೆಯಲ್ಲಿ ಚಿನ್ನ ಖರೀದಿಸಿದರೂ, ಮಾರಿದರೂ ಒಂದೇ ರೀತಿಯ ಬೆಲೆ ಸಿಗಬೇಕು.
‘ಒಂದು ರಾಷ್ಟ್ರ, ಒಂದು ಚಿನ್ನದ ದರ’ ಜಾರಿಯಾದರೆ ಬೆಲೆಯಲ್ಲಿ ಸ್ಥಿರತೆ ಇರಲಿದೆ. ಬಂಗಾರದ ಬೆಲೆಯಲ್ಲಿನ ಏರಿಳಿತಗಳು ಕಡಿಮೆಯಾಗಲಿವೆ.