ಇನ್ನು ಹತ್ತೇ ದಿನಗಳಲ್ಲಿ ಈ ರಾಶಿಯವರ ಕನಸೆಲ್ಲಾ ನನಸಾಗುವುದು ! ಹೋದಲೆಲ್ಲಾ ಜೊತೆಗಿರುವುದು ಅದೃಷ್ಟ
ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಇರುತ್ತವೆ. ಈ ಸ್ಥಿತಿಯನ್ನು ಗ್ರಹಗಳ ಸಂಯೋಗ ಎಂದು ಕರೆಯಲಾಗುತ್ತದೆ. ಅಂಥಹ ಒಂದು ಸಂಯೋಗವು ಏಪ್ರಿಲ್ 22 ರಿಂದ ರೂಪುಗೊಳ್ಳಲಿದೆ.
ಬುಧ ಗ್ರಹವು ಮಾರ್ಚ್ 31 ರಂದು ಮೇಷ ರಾಶಿಯನ್ನು ಪ್ರವೇಶಿಸಿದೆ. ದೇವಗುರು ಗುರುವು ಕೂಡಾ ಏಪ್ರಿಲ್ 22 ರಂದು ಮೇಷ ರಾಶಿಯಲ್ಲಿ ಸಂಕ್ರಮಿಸಲಿದೆ. ಹೀಗಾಗಿ ಮೇಷ ರಾಶಿಯಲ್ಲಿ ಬುಧ-ಗುರುವಿನ ಸಂಯೋಗವಿರುತ್ತದೆ. ಇದು ಮೂರು ರಾಶಿಯವರ ಜೀವನವನ್ನು ಬೆಳಗಲಿದೆ.
ಗುರು ಮತ್ತು ಬುಧದ ಸಂಯೋಜನೆಯು ಮೇಷ ರಾಶಿಯವರಿಗೆ ವರದಾನಕ್ಕಿಂತ ಕಡಿಮೆಯಾಗಿರುವುದಿಲ್ಲ. ಈ ಸಮಯದಲ್ಲಿ, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಪಾರ್ಟನರ್ ಶಿಪ್ ನಲ್ಲಿ ಮಾಡುವ ಕೆಲಸಗಳು ಯಶಸ್ಸಿಗೆ ಕಾರಣವಾಗುತ್ತವೆ.
ಮಿಥುನ ರಾಶಿಯವರಿಗೆ ಗುರು ಮತ್ತು ಬುಧ ಗ್ರಹಗಳ ಸಂಯೋಗವು ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ, ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಹಣಕಾಸಿನ ಪ್ರಯೋಜನವಾಗುವುದು. ವಿದೇಶದಲ್ಲಿ ಉದ್ಯೋಗ ಪಡೆಯುವ ಕನಸು ಈ ಸಮಯದಲ್ಲಿ ನನಸಾಗಬಹುದು. ಹಳೆಯ ಹೂಡಿಕೆಯಿಂದ ಲಾಭವಾಗುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿಯವರಿಗೆ ಗುರು ಮತ್ತು ಬುಧ ಗ್ರಹಗಳ ಸಂಯೋಗವು ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ, ಈ ರಾಶಿಯವರು ತಮ್ಮ ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರಸ್ಥರು ವ್ಯಾಪಾರದಲ್ಲಿ ಅಪಾರ ಲಾಭವನ್ನು ಪಡೆಯುತ್ತಾರೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿರುವವರ ಆಸೆ ಈಡೇರುತ್ತದೆ
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)