50 ವರ್ಷಗಳ ಬಳಿಕ ಸಿಂಹ ರಾಶಿಯಲ್ಲಿ ಮೂರು ಗ್ರಹಗಳ ಅಪರೂಪದ ಮೈತ್ರಿ, ಈ ಜನರ ಮೇಲೆ ಅಪಾರ ಧನವೃಷ್ಟಿ!
Trigrahi Yog: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಪ್ರಸ್ತುತ ಗ್ರಹಗಳ ಈ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯಲ್ಲಿ ಮಂಗಳ-ಬುಧ ಹಾಗೂ ಶುಕ್ರರ ಅಪರೂಪದ ಮೈತ್ರಿ ನೆರವೇರಿದ್ದು, ಇದು ಮೂರು ರಾಶಿಗಳ ಜನರಿಗೆ ಅಪಾರ ಉನ್ನತಿ ಹಾಗೂ ಧನಪ್ರಾಪ್ತಿಯ ಯೋಗವನ್ನು ರೂಪಿಸುತ್ತಿದೆ. ಬನ್ನಿ ಆದೃಷ್ಟವಂತ (Spiritual News In Kannada) ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಕುಂಭ ರಾಶಿ: ಸಿಂಹ ರಾಶಿಯಲ್ಲಿ ನಿರ್ಮಾಣಗೊಂಡ ತ್ರಿಗ್ರಹಿ ಯೋಗ ಕುಂಭ ರಾಶಿಯವರ ಜಾತಕದವರ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇನ್ನೊಂದೆಡೆ ಶನಿಯ ಸಮಸಪ್ತಕ ದೃಷ್ಟಿ ಸಂಬಂಧ ಕೂಡ ರೂಪುಗೂಳ್ಳುತ್ತಿದೆ. ಹೀಗಾಗಿ ಇದರಿಂದ ನಿಮ್ಮ ಲವ್ ಲೈಫ್ ಉತ್ತಮವಾಗಲಿದೆ. ಆಕಸ್ಮಿಕ ಧನಲಾಭ ಪ್ರಾಪ್ತಿಯೋಗ ಕೂಡ ರೂಪುಗೊಳ್ಳುತ್ತಿದೆ. ದೈನಂದಿನ ಆದಾಯದಲ್ಲಿ ಹೆಚ್ಚಳದ ಜೊತೆಗೆ ಪಾರ್ಟ್ನರ್ ಶಿಪ್ ವ್ಯವಹಾರದಿಂದಲೂ ಕೂಡ ಉತ್ತಮ ಆದಾಯ ಹರಿದುಬರಲಿದೆ. ಇನ್ನೊಂದೆಡೆ ನಿಮ್ಮ ಗೋಚರ ಜಾತಕದಲ್ಲಿ ಶಶ ಹಾಗೂ ಕೇಂದ್ರ ತ್ರಿಕೋನ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದ್ದು, ಈ ಅವಧಿಯಲ್ಲಿ ಆರೋಗ್ಯ ಸುಧಾರಣೆಯಾಗಿ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ.
ಸಿಂಹ ರಾಶಿ: ಮಂಗಳ-ಬುಧ-ಶುಕ್ರರ ಈ ತ್ರಿಗ್ರಹಿ ಯೋಗ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದು ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಇನ್ನೊಂದೆಡೆ ನಿಮ್ಮ ಜಾತಕದ ಲಾಭ ಹಾಗೂ ಧನ ಭಾವದ ಅಧಿಪತಿಯೂ ಕೂಡ ನಿಮ್ಮ ರಾಶಿಯಲ್ಲಿಯೇ ವಿರಾಜಮಾನನಾಗಿದ್ದಾನೆ. ಸುಖ-ಸೌಕರ್ಯಗಳ ಅಧಿಪತಿ ಮಂಗಳ ಕೂಡ ನಿಮ್ಮ ರಾಶಿಯಲ್ಲಿಯೇ ಕುಳಿತಿದ್ದಾನೆ. ಕರ್ಮ ಭಾವದ ಸ್ವಾಮಿ ಶುಕ್ರ ಕೂಡ ನಿಮ್ಮ ರಾಶಿಯಲ್ಲಿಯೇ ಇದ್ದಾನೆ. ಹೀಗಾಗಿ ಸಾವಧಿಯಲ್ಲಿ ವೈವಾಹಿಕ ಜೀವನದಲ್ಲಿ ಕೊಂಚ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ವಾಹನ ಹಾಗೂ ಆಸ್ತಿಪಾಸ್ತಿ ಸಿಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿಮ್ಮ ಇಚ್ಛೆ-ಆಕಾಂಕ್ಷೆಗಳು ಈಡೇರಲಿವೆ. ಈ ಅವಧಿಯಲ್ಲಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.
ತುಲಾ ರಾಶಿ: ಮಂಗಳ-ಬುಧ-ಶುಕ್ರರ ಮೈತ್ರಿಯಿಂದ ನಿರ್ಮಾಣಗೊಳ್ಳುತ್ತಿರುವ ಈ ತ್ರಿಗ್ರಹಿ ಯೋಗ, ನಿಮ್ಮ ಪಾಲಿಗೆ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ, ಈ ಯುತಿ ನಿಮ್ಮ ಜಾತಕದ ಆದಾಯ ಸ್ಥಾನದಲ್ಲಿ ನೆರವೇರಿದೆ. ಇನ್ನೊಂದೆಡೆ ನಿಮ್ಮ ಜಾತಕದ ಮೇಲೆ ಶನಿ ಸಮಸಪ್ತಕ ದೃಷ್ಟಿ ಕೂಡ ಬೀರಿದ್ದಾನೆ. ನಿಮ್ಮ ಜಾತಕದ ಲಾಭ ಭಾವದ ಅಧಿಪತಿ, ಭಾಗ್ಯ ಭಾವದ ಅಧಿಪತಿ ಹಾಗೂ ದಾಂಪತ್ಯ ಜೀವನದ ಅಧಿಪತಿಗಳು ಕೂಡ ಲಾಭಭಾವದಲ್ಲಿ ವಿರಾಜಮಾನನಾಗಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳಲಿವೆ. ಒಂದು ವೇಳೆ ಬಾಳಸಂಗಾತಿ ಜೊತೆಗೆ ಸೇರಿ ನೀವು ಯಾವುದಾದರೊಂದು ಬಿಸ್ನೆಸ್ ಆರಂಭಿಸಲು ಬಯಸುತ್ತಿದ್ದರೆ, ಈ ಸಮಯ ನಿಮ್ಮ ವ್ಯವಸಾಯಕ್ಕೆ ಸಾಕಷ್ಟು ಅನುಕೂಲಕರವಾಗಿದೆ. ನೌಕರ ವರ್ಗದ ಜನರಿಗೆ ಪದೋನ್ನತಿ ಭಾಗಿ ಪ್ರಾಪ್ತಿಯಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)