ಒಂದು ವರ್ಷದ ಬಳಿಕ ತುಲಾ ರಾಶಿಯಲ್ಲಿ ಮಂಗಳ-ಸೂರ್ಯರ ಮೈತ್ರಿ, ಈ ಜನರಿಗೆ ಧನಕುಬೇರ ಯೋಗ ಪ್ರಾಪ್ತಿಯಿಂದ ಅಪಾರ ಧನಲಾಭ!
Sun Mars Conjunction In Libra 2023: ವೈದಿಕ ಪಂಚಾಂಗದ ಪ್ರಕಾರ ಬರುವ ಅಕ್ಟೋಬರ್ 18 ರಂದು ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯನ ತುಲಾ ಗೋಚರ ನೆರವೇರಲಿದೆ. ಇದರಿಂದ ಈಗಾಗಲೇ ತುಲಾ ರಾಶಿಯಲ್ಲಿ ಮಂಗಳ ಇರುವ ಕಾರಣ ಅಲ್ಲಿ ಸೂರ್ಯ-ಮಂಗಳರ ಮೈತ್ರಿ ನೆರವೇರಲಿದೆ. ಇದರಿಂದ ಮೂರು ರಾಶಿಗಳ ಜನರಿಗೆ ಧನಕುಬೇರ ಯೋಗ ಪ್ರಾಪ್ತಿಯಾಗಿ ಅವರ ಜೀವನದಲ್ಲಿ ಒಳ್ಳೆಯ ಕಾಲ ಆರಂಭಗೊಳ್ಳಲಿದೆ. Spiritual News In Kannada
ಸಿಂಹ ರಾಶಿ: ಸೂರ್ಯ-ಮಂಗಳರ ಈ ಮೈತ್ರಿ ಯೋಗ ನಿಮ್ಮ ಜಾತಕದ ತೃತೀಯ ಭಾವದಲ್ಲಿ ರೂಪುಗೊಳ್ಳಲಿದೆ. ಇದರಿಂದ ಈ ಮೈತ್ರಿ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮದಲ್ಲಿ ಅಪಾರ ಹೆಚ್ಚಳವಾಗುವ ಸಾಧ್ಯತೆ ಇದೆ. ಇದಲ್ಲದೆ ಶತ್ರುಗಳ ಮೇಲೆ ಜಯ ಸಾಧಿಸುವಲ್ಲಿ ನೀವು ಯಶಸ್ಸನ್ನು ಕಾಣುವಿರಿ. ಕುಟುಂಬ ಸದಸ್ಯರ ನಡುವೆ ಐಕ್ಯತೆ ಹೆಚ್ಚಾಗಲಿದೆ. ವಿದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ಈ ಸಮಯ ಅತ್ಯಂತ ಶುಭವಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಬಂಧು-ಮಿತ್ರರ ಸಹಾಯ ಕೂಡ ಸಿಗಲಿದೆ.
ಧನು ರಾಶಿ: ಸೂರ್ಯ ಮಂಗಳರ ಈ ಯುತಿ ಧನು ರಾಶಿಯ ಜಾತಕದವರಿಗೆ ಅಪಾರ ಅನುಳೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಲಾಭ ಹಾಗೂ ಆದಾಯ ಎರಡೂ ಭಾಗಗಳಲ್ಲಿ ರಚನೆಯಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವನ್ನು ನೀವು ಕಾಣುವಿರಿ. ಆದಾಯದ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಲಿವೆ. ವಿದೇಶಕ್ಕೆ ಹೋಗಬಯಸುವವರ ಆಸೆ ಈಡೇರಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಹಳೆ ಹೂಡಿಕೆಗಳಿಂದ ಅಪಾರ ಲಾಭ ಸಿಗಲಿದೆ. ಮಕ್ಕಳಿಗೆ ಸಂಬಂಧಿಸಿದ ಯಾವುದಾದರೊಂದು ಗುಡ್ ನ್ಯೂಸ್ ನಿಮಗೆ ಸಿಗಲಿದೆ. ಷೇರುಪೇಟೆ, ಲಾಟರಿಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಮಯ ಅನುಕೂಲಕರವಾಗಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯ ಜಾತಕದವರಿಗೆ ಈ ಯುತಿ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. ಏಕೆಂದರೆ ಈ ಯುತಿ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ರಚನೆಯಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಎಲ್ಲಿಂದಲೋ ಬರಬೇಕಾದ ನಿಮ್ಮ ಹಣ ನಿಮ್ಮ ಕೆಸೇರುವ ಸಾಧ್ಯತೆ ಇದೆ. ನೌಕರವರ್ಗದ ಜನರು ಕಚೇರಿಯಲ್ಲಿ ತಮ್ಮ ವಿಶೇಷ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುವರು. ಮೀಡಿಯಾ, ಮಾರ್ಕೆಟಿಂಗ್, ಶಿಕ್ಷಣ ಇತ್ಯಾದಿ ಕ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)