ಸುದೀರ್ಘ 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಈ ಯೋಗ ನಿರ್ಮಾಣ, ವಜ್ರದಂತೆ ಹೊಳೆಯಲಿದೆ 3 ರಾಶಿಗಳ ಜನರ ಭಾಗ್ಯ!

Sat, 04 Mar 2023-5:04 pm,

ವೃಷಭ ರಾಶಿ- ತ್ರಿಗ್ರಾಹಿ ಯೋಗವು ವೃಷಭ ರಾಶಿಯವರಿಗೆ ಆರ್ಥಿಕವಾಗಿ ಅತ್ಯಂತ ಮಂಗಳಕರ ಸಾಬೀತಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಕರ್ಮ ಭಾವದ ಮೇಲೆ ಈ ಯೋಗವು ರೂಪುಗೊಳ್ಳಲಿದೆ. ಇದರಿಂದಾಗಿ ನೀವು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಇದರೊಂದಿಗೆ, ವ್ಯಾಪಾರಕ್ಕೆ ಸಂಬಂಧಿಸಿದ ಜನರು ಸಹ ಇದರಿಂದ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಮತ್ತೊಂದೆಡೆ, ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಯಿದೆ. ಗೌರವ ಮತ್ತು ಘನತೆ ಹೆಚ್ಚಾಗಲಿದೆ. ಇದೇ ವೇಳೆ  ತಂದೆಯೊಂದಿಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ಅಲ್ಲದೆ, ಉದ್ಯೋಗದಲ್ಲಿರುವವರು ಈ ಅವಧಿಯಲ್ಲಿ ಇನ್‌ಕ್ರಿಮೆಂಟ್ ಮತ್ತು ಬಡ್ತಿ ಎಲ್ಲಾ ಯೋಗಗಳಿವೆ. 

ಮಿಥುನ ರಾಶಿ- ತ್ರಿಗ್ರಹಿ ಯೋಗವು ನಿಮಗೆ ಅತ್ಯಂತ ಶುಭಫಲಪ್ರದ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ನವಮೇಶ ಭಾವದಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಇದು ಅದೃಷ್ಟ ಮತ್ತು ವಿದೇಶಿ ಪ್ರಯಾಣದ ಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಸಮಯದಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರಲಿದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಒಳ್ಳೆಯ ಸುದ್ದಿ ಪಡೆಯಬಹುದು. ವಿದೇಶದಲ್ಲಿ ವಾಸಿಸುವ ಅಥವಾ ಕೆಲಸ ಮಾಡಲು ಬಯಸುವವರ ಕನಸು ಕೂಡ ಸನಸಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ, ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಅಲ್ಲದೆ, ಈ ಸಮಯದಲ್ಲಿ ನಿಮಗೆ ಆರ್ಥಿಕ ದೃಷ್ಟಿಯಿಂದ ಲಾಭದ ಬಲವಾದ ಸಾಧ್ಯತೆಗಳನ್ನು ಹೊಂದಿರುವಿರಿ.

ಕುಂಭ ರಾಶಿ- ತ್ರಿಗ್ರಹಿ ಯೋಗವು ನಿಮಗೆ ಅತ್ಯಂತ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯೊಂದಿಗೆ ಲಗ್ನ ಭಾವದಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದರೊಂದಿಗೆ ಕುಂಭ ರಾಶಿಯವರಿಗೆ ಹಣ ಗಳಿಸುವ ಅವಕಾಶಗಳು ಪ್ರಾಪ್ತಿಯಗಲಿವೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವರು. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಇದರೊಂದಿಗೆ ಬಾಳಸಂಗಾತಿ ಪ್ರಗತಿಯೂ ಉತ್ತಮವಾಗಿರಲಿದೆ. ಮತ್ತೊಂದೆಡೆ, ಉದ್ಯಮಿಗಳಿಗೆ ಅವರು ನೀಡಿದ ಸಾಲದ ರೂಪದ ಹಣ ಅವರತ್ತ ಮರಳಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀದಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link