ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!

Mon, 29 Jul 2024-4:45 pm,

ಕನ್ನಡ ಚಿತ್ರರಂಗದ ಖ್ಯಾತ ಖಳ ನಟ ಸುಧೀರ್ ಕಿರಿಯ ಪುತ್ರ ತರುಣ್ ಸುಧೀರ್. ಕನ್ನಡ ಸಿನಿರಂಗದಲ್ಲಿ ನಿರ್ದೇಶಕರಾಗಿ ಸಾಕಷ್ಟು ಹಿಟ್ ಪಡೆದಿದ್ದಾರೆ. 

ಚೌಕ, ರಾಬರ್ಟ್ ಮತ್ತು ಕಾಟೇರದಂತಹ ಹಿಟ್ ಸಿನಿಮಾಗಳನ್ನು ತರುಣ್‌ ಸುಧೀರ್‌ ನಿರ್ದೇಶಿಸಿದ್ದಾರೆ.   

ತರುಣ್ ಸುಧೀರ್ 1982 ರಲ್ಲಿ ಜನಿಸಿದರೆಂದು ಹೇಳಲಾಗುತ್ತದೆ. ಈ ಪ್ರಕಾರ ತರುಣ್ ಸುಧೀರ್ ಸದ್ಯ 41 ವರ್ಷ ವಯಸ್ಸಿನವರಾಗಿದ್ದಾರೆ ಎನ್ನಲಾಗಿದೆ. ತರುಣ್ ತಮ್ಮ ವಯಸ್ಸಿನ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.

ಸೋನಾಲ್ ತುಳು ಭಾಷೆಯ 'ಎಕ್ಕ ಸಕ್ಕ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 2018ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದರು. ಸುಮಾರು 12 ಸಿನಿಮಾಗಳಲ್ಲಿ ನಟಿಸಿದ್ದಾರೆ.   

ಸೋನಾಲ್ 1995 ರಲ್ಲಿ ಜನಿಸಿದ್ದು, ಅವರ ನಿಜವಾದ ವಯಸ್ಸು ಈಗ 29 ವರ್ಷ ಎಂದು ಹೇಳಲಾಗುತ್ತದೆ. ಈ ಪ್ರಕಾರ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ನಡುವಿನ ವಯಸ್ಸಿನ ಅಂತರ 12 ವರ್ಷ ಎಂದು ಹೇಳಲಾಗುತ್ತಿದೆ. 

ತರುಣ್‌ ಸುಧೀರ್‌ - ಸೋನಾಲ್‌ ಮದುವೆ ಆಗಸ್ಟ್ 11ರಂದು ಬೆಂಗಳೂರಿನಲ್ಲಿ ನಡೆಯಲಿದೆ. (ಇಬ್ಬರು ತಮ್ಮ ವಯಸ್ಸಿನ ಬಗ್ಗೆ ಅಧಿಕೃತವಾಗಿ ಹೇಳಿಕೊಳ್ಳದಿರುವ ಕಾರಣ ವಯಸ್ಸಿನ ಅಂತರವನ್ನು ವಿಕ್ಕಿಪೀಡಿಯ ಆಧರಿಸಿ ಲೆಕ್ಕ ಹಾಕಲಾಗಿದೆ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link