Airtel Offer! ನೀವೂ Airtel Sim ಬಳಸುತ್ತೀರಾ? ಕಂಪನಿಯಿಂದ ನೀವು ನಾಲ್ಕು ಲಕ್ಷ ರೂ. ಲಾಭ ಪಡೆಯಬಹುದು, ಹೇಗೆ ಅಂತಿರಾ?
1. ಏರ್ಟೆಲ್ ನಿಂದ ಉಚಿತ 4 ಲಕ್ಷ ರೂ.ಗಳ ಟರ್ಮ್ ಲೈಫ್ ಇನ್ಸೂರೆನ್ಸ್ ಪ್ಲಾನ್ - ಏರ್ಟೆಲ್ ತನ್ನ ಗ್ರಾಹಕರಿಗೆ ಎರಡು ಪ್ರಿಪೇಡ್ ರಿಚಾರ್ಜ್ ಯೋಜನೆಗಳೊಂದಿಗೆ ಟರ್ಮ್ ಲೈಫ್ ಇನ್ಸೂರೆನ್ಸ್ ನೀಡುತ್ತಿದೆ. ಈ ಸ್ಪೆಷಲ್ ಆಫರ್ ಅಡಿ ಒಟ್ಟು ಎರಡು ಪ್ಲಾನ್ ಗಳಿವೆ. ರೂ.279ರ ಮೊದಲ ರಿಚಾರ್ಜ್ ನಲ್ಲಿ ಇತರೆ ಲಾಭಗಳ ಜೊತೆಗೆ 4 ಲಕ್ಷ ರೂ.ಗಳ ಟರ್ಮ್ ಲೈಫ್ ಇನ್ಸೂರೆನ್ಸ್ ಸಿಗುತ್ತಿದೆ. ಇನ್ನೊಂದೆಡೆ ರೂ.179ರ ಯೋಜನೆಯ ಜೊತೆಗೆ 2 ಲಕ್ಷ ರೂ.ಗಳ ಟರ್ಮ್ ಇನ್ಸೂರೆನ್ಸ್ ಸಿಗುತ್ತಿದೆ.
2. EPFO ನಲ್ಲಿ ಉಚಿತ 7 ಲಕ್ಷ ರೂ.ಗಳ ಇನ್ಸುರನ್ಸ್ ಕವರ್ ಸಿಗುತ್ತಿದೆ - EPFO ಖಾತೆದಾರರು 'ಉದ್ಯೋಗಿ ಠೇವಣಿ ಲಿಂಕ್ಡ್ ವಿಮಾ ಯೋಜನೆ' (EDLI ವಿಮಾ ರಕ್ಷಣೆ) ಅಡಿಯಲ್ಲಿ ವಿಮಾ ರಕ್ಷಣೆಯ ಸೌಲಭ್ಯವನ್ನು ಸಹ ಪಡೆಯುತ್ತಾರೆ. ಈ ಯೋಜನೆಯಲ್ಲಿ, EPFO ವತಿಯಿಂದ ನಾಮಿನಿಗೆ ಗರಿಷ್ಠ 7 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ.
3. LPG ಮೇಲೆ 50 ಲಕ್ಷ ರೂ.ಗಳ ವಿಮಾ ಸೌಲಭ್ಯ - LPG ಜೊತೆಗೆ ಗ್ರಾಹಕರಿಗೆ ವೈಯಕ್ತಿಕ ಅಪಘಾತ ವಿಮೆ ಸೌಲಭ್ಯ ನೀಡಲಾಗುತ್ತದೆ. ಇದರ ಅಡಿ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿ ಬ್ಲಾಸ್ಟ್ ಸಂಭವಿಸಿದ ಸಂದರ್ಭಗಳಲ್ಲಿ, ಆರ್ಥಿಕ ಪರಿಹಾರದ ರೂಪದಲ್ಲಿ ಈ ಸೌಕರ್ಯ ನೀಡಲಾಗುತ್ತದೆ.
4. ಜನ್-ಧನ್ ಖಾತೆಯ ಮೇಲೆ ವಿಮಾ - ಸರ್ಕಾರದ ಯೋಜನೆಯಾಗಿರುವ ಜನ್-ಧನ್ ಯೋಜನೆಯ ಅಡಿ ತೆರೆಯಲಾಗಿರುವ ಬ್ಯಾಂಕ್ ಖಾತೆಗಳ ಜೊತೆಗೆ ಲಾಭಾರ್ಥಿಗಳಿಗೆ ಸಿಗುವ ರುಪೇ ಡೆಬಿಟ್ ಕಾರ್ಡ್ ಮೇಲೆ 30 ಸಾವಿರ ರೂ.ಗಳ ವಿಮೆ ಹಾಗೂ ಎರಡುಲಕ್ಷಗಳ ವೈಯಕ್ತಿಕ ಅಪಘಾತ ವಿಮಾ ರಕ್ಷಣೆ ಸಿಗುತ್ತದೆ. ಅಂದರೆ, ಒಂದು ವೇಳೆ ನಿಮ್ಮ ಬಳಿಯೂ ಕೂಡ ಜನ್ ಧನ್ ಖಾತೆ ಇದ್ದರೆ, ನೀವೂ ಕೂಡ ಎರಡು ಲಕ್ಷ ರೂ.ಗಳ ವಿಮಾ ಸೌಲಭ್ಯ ಸಿಗುತ್ತದೆ.
5. PNB ನೀಡುತ್ತದೆ ಉಚಿತ ಅಪಘಾತ ವಿಮೆ - ಇದರ ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ RuPay Platinum Debit Card ಮೇಲೆ 2 ಲಕ್ಷ ರೂ.ಗಳ ಉಚಿತ ಅಪಘಾತ ವಿಮೆ ಸೌಲಭ್ಯ ನೀಡುತ್ತದೆ. ಇದಲ್ಲದೆ ಇದರ ಜೊತೆಗೆ ನಿಮಗೆ ಇನ್ನೂ ಹಲವು ಸೌಲಭ್ಯಗಳು ಸಿಗುತ್ತವೆ.