ಅಭಿಷೇಕ್ ಬಚ್ಚನ್ ಜೊತೆಗಿಲ್ಲ ಐಶ್ವರ್ಯಾ ರೈ.. ಮಗಳೊಂದಿಗೆ ಗಂಡನ ಮನೆ ಬಿಟ್ಟು ಬಂದಿದ್ದೇ ನಿಜ! ಆನಿವರ್ಸರಿ ದಿನವೇ ಬಯಲಾಯ್ತು ಎಲ್ಲ ಸತ್ಯ!!
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ 2007 ಏಪ್ರಿಲ್ 20 ರಂದು ವಿವಾಹವಾದರು. ಇಂದಿಗೆ 17 ವರ್ಷಗಳಾಗಿವೆ.
ಪುತ್ರಿ ಆರಾಧ್ಯ ಜೊತೆ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ 17 ನೇ ವಿವಾಹ ವಾರ್ಷಿಕೋತ್ಸವ ಸೆಲಿಬ್ರೇಟ್ ಮಾಡಿದ್ದಾರೆ.
ನಟಿ ಐಶ್ವರ್ಯಾ ರೈ ಬಚ್ಚನ್ ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾಮಿಲಿ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ ಮತ್ತು ರೆಡ್ ಹಾರ್ಟ್ ಎಮೋಜಿಯನ್ನು ಸಹ ಹಾಕಿದ್ದಾರೆ. ಅಭಿಷೇಕ್ ಬಚ್ಚನ್ ಕೂಡ ಇದೇ ರೀತಿ ಪೋಸ್ಟ್ ಹಾಕಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗೆ ಈ ಮೂಲಕ ಬ್ರೇಕ್ ಹಾಕಿದ್ದಾರೆ. ಆದರೆ ಐಶ್ವರ್ಯಾ ರೈ ಬಚ್ಚನ್ ಮಗಳೊಂದಿಗೆ ಗಂಡನ ಮನೆ ಬಿಟ್ಟು ಬಂದಿದ್ದೇ ನಿಜ ಎಂದು ಕೆಲವು ನೆಟ್ಟಿಗರು ಹೇಳುತ್ತಿದ್ದಾರೆ.
ನೆಟ್ಟಿಗರು ಈ ಹೀಗೆ ಹೇಳುವುದಕ್ಕೂ ಒಂದು ಕಾರಣವಿದೆ. ಆನಿವರ್ಸರಿ ಸೆಲಿಬ್ರೇಷನ್ ಫೋಟೋದಲ್ಲಿ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ಪುತ್ರಿ ಆರಾಧ್ಯ ಬಚ್ಚನ್ ಬಿಟ್ಟರೇ ಬೇರಾರೂ ಇಲ್ಲ.
ಫ್ಯಾಮಿಲಿ ಸೆಲ್ಫಿಯಲ್ಲಿ ಅಮಿತಾಬ್ ಹಾಗೂ ಪತ್ನಿ ಜಯಾ ಬಚ್ಚನ್ ಮಿಸ್ಸಿಂಗ್ ಆಗಿದ್ದಾರೆ. ಈ ಹಿನ್ನೆಲೆ ಐಶ್ವರ್ಯಾ ರೈ ಬಚ್ಚನ್ ಮನೆಯಿಂದ ಹೊರ ನಡೆದಿದ್ದೇ ನಿಜ. ಅಭಿಷೇಕ್ ಬಚ್ಚನ್ ಮನೆಯಿಂದ ಐಶ್ವರ್ಯಾ ರೈ ಹೊರಬಂದಿರುವುದು ಸತ್ಯ ಎಂದು ಜನರು ಮಾತನಾಡುತ್ತಿದ್ದಾರೆ.
ಅದೇನೇ ಇರಲಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಾಗಿ ಸಂತಸದಿಂದ ತಮ್ಮ ಆನಿವರ್ಸರಿ ಸೆಲಿಬ್ರೇಟ್ ಮಾಡಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ.