ಐಶ್ವರ್ಯಾ ರೈ ಬಚ್ಚನ್‌ ಅಣ್ಣ ಯಾರು ಗೊತ್ತಾ? ಇವರ ಅತ್ತಿಗೆಯೂ ಸಖತ್‌ ಫೇಮಸ್..‌ ಗ್ಲಾಮರ್ ಲೋಕದಲ್ಲಿ ಮಿಂಚಿದ ಬ್ಯೂಟಿ ಈಕೆ !

Mon, 12 Aug 2024-8:26 am,

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಸಹೋದರನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇವರ ಅತ್ತಿಗೆ ಗ್ಲಾಮರ್ ಲೋಕದಲ್ಲಿ ಮಿಂಚಿದ ಬೆಡಗಿ.  

ಐಶ್ವರ್ಯಾ ರೈ ಬಚ್ಚನ್ ಅವರ ಸಹೋದರನ ಹೆಸರು ಆದಿತ್ಯ ರೈ. ಐಶ್ವರ್ಯಾ ರೈ ಅವರ ಅತ್ತಿಗೆಯ ಹೆಸರು ಶ್ರೀಮಾ ರೈ. ಸೌಂದರ್ಯದಲ್ಲಿ ನಟಿಯರನ್ನೂ ಹಿಂದಿಕ್ಕುವ ಚೆಲುವೆ ಶ್ರೀಮಾ ರೈ.

ಐಶ್ವರ್ಯಾ ರೈ ಬಚ್ಚನ್ ಸಹೋದರ ಆದಿತ್ಯ ರೈ ಮರ್ಚೆಂಟ್ ನೇವಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಆದಿತ್ಯ ರೈ ಸಿನಿಮಾ ನಿರ್ಮಾಪಕರು ಸಹ ಆಗಿದ್ದಾರೆ. 

ಐಶ್ವರ್ಯಾ ರೈ ಅತ್ತಿಗೆ ಶ್ರೀಮಾ ಅವರು ಮಾಡೆಲ್ ಮತ್ತು ಮಿಸೆಸ್ ಇಂಡಿಯಾ ಗ್ಲೋಬ್ 2009 ರ ವಿಜೇತರಾಗಿದ್ದಾರೆ. ಮದುವೆಯ ನಂತರ ವೃತ್ತಿಯನ್ನು ತೊರೆದರು. ಈಗ ಅವರು ಫ್ಯಾಷನ್ ಬಗ್ಗೆ ಬ್ಲಾಗ್ ಮಾಡುವ ಮೂಲಕ ಫೇಮಸ್‌ ಆಗಿದ್ದಾರೆ. 

ಭಾರತದ ಮಂಗಳೂರಿನಲ್ಲಿ ಜನಿಸಿದ ಶ್ರೀಮಾ ಅಮೆರಿಕದ ಫಿಲಡೆಲ್ಫಿಯಾದಲ್ಲಿ ಬೆಳೆದರು. ಐಶ್ವರ್ಯಾ ರೈ ಸಹೋದರ ಆದಿತ್ಯ ಅವರನ್ನು ಮದುವೆಯಾದ ನಂತರ ಮುಂಬೈನ ಬಾಂದ್ರಾದಲ್ಲಿ ನೆಲೆಸಿದರು.

ಶ್ರೀಮಾ ಮತ್ತು ಆದಿತ್ಯ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಶಿವಾಂಶ್ ರೈ ಮತ್ತು ವಿಹಾನ್ ರೈ. ಆದಿತ್ಯ ರೈ ಮತ್ತು ಶ್ರೀಮಾ ರೈ ಮೊದಲ ಬಾರಿಗೆ ಔತಣಕೂಟವೊಂದರಲ್ಲಿ ಭೇಟಿಯಾದರು, ಆಗ ಶ್ರೀಮಾ 20 ವರ್ಷದವರಾಗಿದ್ದರು.

ಅನೇಕ ಮ್ಯಾಗಜೀನ ಪೇಜ್‌ಗಳಲ್ಲಿ ಕಾಣಿಸಿಕೊಂಡ ಶ್ರೀಮಾ ರೈ ಮುಂಬೈನ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನಲ್ಲಿಯೂ ಕೆಲಸ ಮಾಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link