ನುಚ್ಚು ನೂರಾಯ್ತು ಐಶ್ವರ್ಯ ರೈ ಕನಸ್ಸು? ನಟಿ ಬಯಸಿದ್ದು ʻಅಂತಹʼ ಸಂಗಾತಿಯನ್ನಂತೆ!

Mon, 16 Sep 2024-7:43 am,

ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳ ಕಾರಣದಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಈ ವದಂತಿಗಳ ನಡುವೆ ಐಶ್ವರ್ಯಾ ಸಂದರ್ಶನವೊಂದು ವೈರಲ್ ಆಗುತ್ತಿದೆ.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ 2007 ರಲ್ಲಿ ವಿವಾಹವಾದರು. ಇಬ್ಬರಿಗೂ ಮದುವೆಯಾಗಿ 17 ವರ್ಷಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಚಲನಚಿತ್ರಗಳಿಂದ ದೂರವಿರುವ ನಟಿ ತನ್ನ ವೈಯಕ್ತಿಕ ಜೀವನದ ಕಾರಣ ಸದಾ ಸುದ್ದಿಯಲ್ಲಿರುತ್ತಾರೆ. ಐಶ್ವರ್ಯಾ ತನ್ನ ಹಳೆಯ ಸಂದರ್ಶನದಲ್ಲಿ ತನಗೆ ಯಾವ ರೀತಿಯ ಹುಡುಗ ಬೇಕು ಎಂದು ಹೇಳಿದ್ದರು. ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ರೆಡಿಫ್‌ಗೆ ನೀಡಿದ ಹಳೆಯ ಸಂದರ್ಶನದಲ್ಲಿ, ಐಶ್ವರ್ಯಾ ರೈ, "ನನ್ನ ಹುಡಗ ನನ್ನನ್ನು ಹುಚ್ಚನಂತೆ ಪ್ರೀತಿಸುವವನಾಗಿರಬೇಕು, ಪ್ರೀತಿಯ ವಿಚಾರದಲ್ಲಿ ನಾನೆಂದೂ ರಾಜಿ ಮಾಡಿಕೊಳ್ಳಲಾರೆ. ನಾನು ತುಂಬಾ ರೋಮ್ಯಾಂಟಿಕ್‌ ಆಗಿರಲು ಭಯಸುತ್ತೇನೆ, ಆದ್ದರಿಂದ ನನಗೆ ಅನುಗುಣವಾಗಿ ನನ್ನ ಹುಡುಗ ಇರಬೇಕು" ಎಂದಿದ್ದರು.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ  ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದಾಗ ವಿಚ್ಛೇದನದ ವದಂತಿಗಳು ವೇಗವನ್ನು ಪಡೆದುಕೊಂಡವು, ದಂಪತಿಗಳು ಒಮ್ಮೆಯೂ ಮಾಧ್ಯಮದ ಮುಂದೆ ಪೋಸ್ ನೀಡಲಿಲ್ಲ, ಇದರಿಂದಾಗಿ ವಿಚ್ಛೇದನದ ವದಂತಿಗಳು ಹೆಚ್ಚಾದವು.

ಇದರ ನಂತರ, ಐಶ್ವರ್ಯಾ ರೈ ತನ್ನ ಮಗಳು ಆರಾಧ್ಯ ಬಚ್ಚನ್ ಜೊತೆ ರಜೆಯ ಮೇಲೆ ಅನೇಕ ಬಾರಿ ಕಾಣಿಸಿಕೊಂಡರು, ಆದರೆ ಈ ಸಮಯದಲ್ಲಿ ಅಭಿಷೇಕ್ ಬಚ್ಚನ್ ನಟಿಯೊಂದಿಗೆ ಕಾಣಿಸಿಕೊಂಡಿರಲಿಲ್ಲ.

ಇತ್ತೀಚೆಗೆ, ಬಹಳ ಸಮಯದ ನಂತರ, ಐಶ್ವರ್ಯಾ ಮತ್ತು ಆರಾಧ್ಯ ಜಲ್ಸಾ ಹೊರಗೆ ಕಾಣಿಸಿಕೊಂಡರು. ಅದರ ನಂತರ ಅವರ ವಿಚ್ಛೇದನದ ಬಗ್ಗೆ ಹೆಚ್ಚು ಚರ್ಚೆಯಾಯಿತು. ಆದರೆ, ಇದುವರೆಗೂ ಐಶ್ವರ್ಯಾ ಮತ್ತು ಅಭಿಷೇಕ್ ಈ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link