ನನ್ನ ಮಗಳು ಯಾವತ್ತೂ ನನ್ನೊಂದಿಗೆಯೇ ಇರುತ್ತಾಳೆ... ಡಿವೋರ್ಸ್ ವದಂತಿ ಮಧ್ಯೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಐಶ್ವರ್ಯ ರೈ ಬಚ್ಚನ್ !
Aaradhya bachchan: ಅಬುಧಾಬಿಯಲ್ಲಿ ನಡೆದ IIFA ಉತ್ಸವಂ 2024 ರ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಈ ವೇಳೆ ಐಶ್ವರ್ಯ ರೈ ಸೇರಿದಂತೆ ಹಲವು ತಾರೆಯರು ಕಾಣಿಸಿಕೊಂಡಿದ್ದರು.
ಐಶ್ವರ್ಯಾ ರೈ ಜೊತೆಗೆ ಅವರ ಮಗಳು ಆರಾಧ್ಯ ಬಚ್ಚನ್ ಕೂಡ IIFA ಉತ್ಸವಂ 2024 ರಲ್ಲಿ ಭಾಗವಹಿಸಿದ್ದರು.
ಈ ಸಮಯದಲ್ಲಿ ಐಶ್ವರ್ಯಾ ರೈ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಮಗಳು ಆರಾಧ್ಯ ಬಚ್ಚನ್ ತನ್ನೊಂದಿಗೆ ಏಕೆ ಎಲ್ಲ ಕಡೆಯೂ ಬರುತ್ತಾಳೆ ಎಂಬುದಕ್ಕೆ ಐಶ್ವರ್ಯಾ ರೈ ಉತ್ತರಿಸಿದ್ದಾರೆ.
ಪತ್ರಕರ್ತರೊಬ್ಬರು ಆರಾಧ್ಯ ಅವರನ್ನು ಯಾಕೆ ಎಲ್ಲ ಕಡೆಯೂ ಕರೆದುಕೊಂಡು ಬರುವಿರಿ ಎಂದು ಕೇಳಿದ್ದಾರೆ. ಇದಕ್ಕೆ ಕೊಂಚ ಸಿಟ್ಟಿನಿಂದಲೇ ಐಶ್ವರ್ಯಾ ರೈ ಉತ್ತರಿಸಿದಂತಿದೆ.
‘ಅವಳು ನನ್ನ ಮಗಳು.. ಅವಳು ನನ್ನೊಂದಿಗೆ ಎಲ್ಲ ಕಡೆ ಬರುತ್ತಾಳೆ. ನನ್ನ ಜೊತೆಯೇ ಅವಳು ಸದಾ ಇರುತ್ತಾಳೆʼ ಎಂದು ಐಶ್ವರ್ಯಾ ರೈ ಉತ್ತರಿಸಿದ್ದಾರೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ವದಂತಿ ನಡುವೆ ಈ ವಿಡಿಯೋ ವೈರಲ್ ಆಗಿದೆ.