ವಿದ್ಯಾರ್ಥಿಗಳಿಗೆ ಸಿಹಿಸುದ್ದಿ... ನವೆಂಬರ್ 13ರಿಂದ 6 ದಿನಗಳ ಕಾಲ ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ: ಸರ್ಕಾರದ ಈ ಮಹತ್ವದ ಘೋಷಣೆಗೆ ಕಾರಣವೇನು?
ದೇಶದೆಲ್ಲೆಡೆ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇನ್ನೊಂದೆಡೆ ಮಳೆ, ಇತರ ಹಬ್ಬ ಹರಿದಿನ ಅಂತಾ ಒಂದಷ್ಟು ದಿನ ರಜೆ ಘೋಷಣೆ ಮಾಡಲಾಗಿತ್ತು.
ಇದೀಗ ಮತ್ತೆ ನವೆಂಬರ್ 13ರಿಂದ 18ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ.
ಈ ವರ್ಷದ ಕ್ಯಾಲೆಂಡರ್ ಅನುಸಾರ ನವೆಂಬರ್ 13ರಂದು ತುಳಸೀ ಪೂಜೆ ಇದೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ, ನವೆಂಬರ್ 15ರಂದು ನವೆಂಬರ್ 15 ರಂದು ಗುರುನಾನಕ್ ಜಯಂತಿಯಿದ್ದು, ನವೆಂಬರ್ 16ರಂದು ಶನಿವಾರವಾದ ಕಾರಣ ಅರ್ಧ ದಿನ ತರಗತಿಗಳು ನಡೆಯುತ್ತವೆ.
ಇದಾದ ನಂತರ ನವೆಂಬರ್ 17ರಂದು ಭಾನುವಾರವಾಗಿದ್ದು, ನವೆಂಬರ್ 18ರಂದು ಕನಕದಾಸ ಜಯಂತಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಅನೇಕ ಶಾಲೆಗಳಲ್ಲಿ ರಜೆ ನೀಡಲಾಗುತ್ತದೆ.
ಒಟ್ಟಾರೆಯಾಗಿ ಕರ್ನಾಟಕ ಸೇರಿದಂತೆ ದೇಶದ ಅನೇಕ ಶಾಲಾ ಕಾಲೇಜುಗಳಲ್ಲಿ ನವೆಂಬರ್ 13 ರಿಂದ 18ರವರೆಗೆ ಸತತ ರಜೆ ಸಿಗಲಿದೆ.
ಇನ್ನೊಂದೆಡೆ ಈ ರಜೆಗಳನ್ನು ನೀಡುವುದು ಆಯಾಯ ಶಿಕ್ಷಣ ಸಂಸ್ಥೆಗಳ ಪರಿಗಣನೆಗೆ ಬಿಟ್ಟಿದ್ದಾಗಿದ್ದು, ಕ್ಯಾಲೆಂಡರ್‌ಗಳಲ್ಲಿ ಪ್ರಕಟವಾದ ಮಾಹಿತಿಯನ್ನಷ್ಟೇ ಇಲ್ಲಿ ನೀಡಲಾಗಿದೆ. ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.