Amala Paul: ಕಡಲ ತೀರದಲ್ಲಿ ಹೆಬ್ಬುಲಿ ನಟಿ.. ಅಲೆಗಳ ಮಧ್ಯ ಬೇಬಿ ಬಂಪ್ ಪೋಟೋಶೂಟ್
ಸೌತ್ ಬ್ಯೂಟಿ ಅಮಲಾ ಪೌಲ್ ಈಗ ತಮ್ಮ ಬೇಬಿ ಬಂಪ್ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ನಟಿ ಗರ್ಭಿಣಿಯಾಗಿದ್ದರೂ ಪತಿ ಜಗತ್ ದೇಸಾಯಿ ಜೊತೆ ರೊಮ್ಯಾಂಟಿಕ್ ಮೂಡ್ ಎಂಜಾಯ್ ಮಾಡುತ್ತಿದ್ದಾರೆ.
ಎರಡನೆ ಮದುವೆಯಾದ ಕೆಲವೇ ದಿನಗಳಲ್ಲಿ ತಾನು ಗರ್ಭಿಣಿಯಾಗಿದ್ದೆ ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡಿರುವ ಅಮಲಾ ಪೌಲ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಪ್‌ಡೇಟ್ ಹಂಚಿಕೊಳ್ಳುತ್ತಿದ್ದಾರೆ.
ತಮಿಳು ನಟ ಜಗತ್ ದೇಸಾಯಿ ಅವರನ್ನು ಪ್ರೀತಿಸುತ್ತಿದ್ದ ಈ ನಟಿ ಕಳೆದ ವರ್ಷಾಂತ್ಯದಲ್ಲಿ ಮದುವೆಯಾಗಿ ಈಗ ತಾಯಿಯಾಗಲಿದ್ದಾರೆ.
ನಟಿ ಅಮಲಾ ನಿರ್ದೇಶಕ ವಿಜಯ್ ಅವರನ್ನು ಮದುವೆಯಾಗಿ ವಿಚ್ಛೇದನ ಪಡೆದರು. ಆ ನಂತರ ವಿಜಯ್ ಮತ್ತೆ ಮದುವೆಯಾದರು ಆದರೆ ಅಮಲಾ ಸಿನಿಮಾದಲ್ಲಿ ಬ್ಯುಸಿಯಾದರು..
ಮೊದಲ ಮದುವೆ ಮುರಿಯುತ್ತಿದ್ದಂತೆ ಎರಡನೇ ಮದುವೆಯಾದ ನಟಿ ಶೀಘ್ರದಲ್ಲೇ ಒಂದು ಮಗುವಿಗೆ ಜನ್ಮ ನೀಡಲಿದ್ದಾರೆ..
ಮದುವೆಯ ನಂತರ ಸಿನಿಮಾದಲ್ಲಿ ನಟಿಸುವಹಾಗಿಲ್ಲ ಎಂದು ಮೊದಲ ಪತಿ ವಿಜಯ್ ಜೊತೆಗಿನ ಒಡನಾಟವನ್ನು ಮುರಿದುಕೊಂಡಿರುವ ಅಮಲಾ ಪಾಲ್ ಈಗ ಮಗುವಿಗೆ ಜನ್ಮ ನೀಡಿದ ನಂತರ ಮತ್ತೆ ನಟಿಸುತ್ತಾರಾ ನೋಡೋಣ ಎನ್ನುತ್ತಿದ್ದಾರೆ ನೆಟ್ಟಿಗರು.