Amala Paul : ಬೆತ್ತಲೆಯಾಗಿಯೇ ನಟಿಸಿದ್ದೇನೆ.. ʼಲಿಪ್‌ಕಿಸ್‌ʼ ಯಾವ ಲೆಕ್ಕ..!

Sun, 23 Apr 2023-4:02 pm,

ಮಲಯಾಳಂ ನಟ ಪೃಥ್ವಿರಾಜ್ ʼಆಡು ಜೀವಿತಂʼ ಚಿತ್ರದಲ್ಲಿ ನಜೀಬ್ ಮೊಹಮ್ಮದ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಪತ್ನಿಯಾಗಿ ನಟಿ ಅಮಲಾ ಪೌಲ್ ನಟಿಸಿದ್ದಾರೆ.

ʼಆಡು ಜೀವಿತಂʼ ಸಿನಿಮಾದಲ್ಲಿ ಆಸ್ಕರ್ ವಿಜೇತ ಎಆರ್ ರೆಹಮಾನ್ ಮತ್ತು ರಸೂಲ್ ಕುಟ್ಟಿ ಇಬ್ಬರೂ ಕೆಲಸ ಮಾಡಿದ್ದಾರೆ.

ಇದು ಮಲಯಾಳಂ ಬರಹಗಾರ ಬೆಂಜಮಿನ್ ಬರೆದ 'ಆಡು ಜೀವಿದಂ' ಕಾದಂಬರಿಯನ್ನು ಆಧರಿಸಿದ ಚಿತ್ರ.

ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಮೂರು ನಿಮಿಷಗಳ ಟ್ರೇಲರ್‌ನಲ್ಲಿ ಪೃಥ್ವಿರಾಜ್ ಅದ್ಭುತ ಅಭಿನಯ ನೀಡಿದ್ದಾರೆ.

ಟ್ರೈಲರ್‌ನಲ್ಲಿ ಅಮಲಾ ಮತ್ತು ಪೃಥ್ವಿರಾಜ್‌ ಲಿಪ್ ಲಾಕ್ ದೃಶ್ಯ ವೈರಲ್‌ ಆದ ಕುರಿತು ಅಮಲಾ ಪೌಲ್ ಪ್ರತಿಕ್ರಿಯೆ ನೀಡಿದ್ದಾರೆ.

ಕಥೆಗೆ ಅಗತ್ಯವಿರುವುದರಿಂದ ನಾನು ಬೆತ್ತಲೆಯಾಗಿ ನಟಿಸಿದ್ದೇನೆ. ಲಿಪ್‌ಲಾಕ್‌ ದೃಶ್ಯ ಏನೂ ಅಲ್ಲ ಎಂದು ಅಮಲಾ ಪೌಲ್ ಸಮರ್ಥನೆ ಮಾಡಿಕೊಂಡಿದ್ದಾರೆ.  

ʼಆಡು ಜೀವಿತಂʼ ಅಕ್ಟೋಬರ್ 20 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link