ಕಲ್ಲಂಗಡಿಗೆ ಚಿಟಕಿ ಉಪ್ಪು ಹಾಕಿ ತಿಂದರೆ ಅಮೃತ ಅದು ! ಯಾಕೆ ಇಲ್ಲಿದೆ ನೋಡಿ
ಕಲ್ಲಂಗಡಿ ಹಣ್ಣಿಗೆ ಉಪ್ಪನ್ನು ಚಿಮುಕಿಸುವುದರಿಂದ ಅದರ ರುಚಿ ಹೆಚ್ಚುತ್ತದೆ. ಆದರೆ ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೋ ಅಲ್ಲವೋ ಎಂಬುದನ್ನು ತಿಳಿಯೋಣ.
ಕಲ್ಲಂಗಡಿ ಒಂದು ರಸಭರಿತ ಹಣ್ಣು. ಇದಕ್ಕೆ ಉಪ್ಪನ್ನು ಹಾಕಿ ತಿನ್ನುವುದರಿಂದ ಹಣ್ಣಿನ ರುಚಿ ಹೆಚ್ಚುತ್ತದೆ.ಅದಕ್ಕಾಗಿಯೇ ಹಲವರು ಕಲ್ಲಂಗಡಿ ಹಣ್ಣಿನ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ತಿನ್ನುತ್ತಾರೆ.
ಕಲ್ಲಂಗಡಿ ಹಣ್ಣಿಗೆ ಉಪ್ಪು ಹಾಕಿ ತಿನ್ನುವುದರಿಂದ ಹಣ್ಣು ಮತ್ತಷ್ಟು ಸಿಹಿಯಾಗುತ್ತದೆ. ಮಾತ್ರವಲ್ಲ ಹಣ್ಣು ತಿಂದ ನಂತರ ಹೊಟ್ಟೆ ತುಂಬಿದ ತೃಪ್ತಿ ಸಿಗುತ್ತದೆ.
ಕಲ್ಲಂಗಡಿ ಒಂದು ರಸಭರಿತವಾದ ಹಣ್ಣಾಗಿರುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುವುದಿಲ್ಲ.ಕಲ್ಲಂಗಡಿಗೆ ಉಪ್ಪನ್ನು ಹಾಕಿದಾಗ,ಅದರಲ್ಲಿರುವ ನೀರಿನ ಅಂಶ ಹೆಚ್ಚಾಗುತ್ತದೆ.
ಕಲ್ಲಂಗಡಿಯಲ್ಲಿ ಲೈಕೋಪೀನ್ ಮತ್ತು ಇತರ ಪೋಷಕಾಂಶಗಳು ಕಂಡುಬರುತ್ತವೆ.ಕಲ್ಲಂಗಡಿಗೆ ಉಪಪು ಹಾಕಿದಾಗ ಈ ಅಂಶಗಳು ಹೆಚ್ಚು ಸಕ್ರಿಯವಾಗುತ್ತವೆ.ದೇಹವು ಈ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಹೆಚ್ಚಿನ ಸಹಾಯವಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.