ಎಣ್ಣೆಯಲ್ಲ, `ನಾಭಿ`ಗೆ ತುಪ್ಪ ಹಚ್ಚೋದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ!
ನಾಭಿ ಅಥವಾ ಹೊಕ್ಕಳು ಮಾನವ ದೇಹದ ಶಕ್ತಿ ಕೇಂದ್ರವಾಗಿದೆ. ಸ್ನಾನ ಮಾಡುವ ಮೊದಲು "ನಾಭಿ"ಗೆ ಒಂದೇ ಒಂದು ಹನಿ ಬೆಣ್ಣೆ ಕಾಯಿಸಿದ ತುಪ್ಪ ಸವರುವುದರಿಂದ ಒಟ್ಟಾರೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ತುಪ್ಪದಲ್ಲಿ ವಿಟಮಿನ್ ಎ, ಡಿ, ಇ, ಕೆ ಸಮೃದ್ಧವಾಗಿದೆ. ಇದನ್ನು ನಾಭಿಗೆ ಅನ್ವಯಿಸಿದಾಗ ಚರ್ಮದ ಶುಷ್ಕತೆ ಕಡಿಮೆಯಾಗಿ ಆರೋಗ್ಯಕರ ಚರ್ಮವನ್ನು ಪೋಷಿಸುತ್ತದೆ.
ನಿಸ್ಸಂಶಯವಾಗಿ ಹೊಕ್ಕಳು ಜೀರ್ಣಕ್ರಿಯೆಯ ಪ್ರಮುಖ ಸ್ಥಾನವಾಗಿದೆ. ಹಾಗಾಗಿ ಒಂದು ಹನಿ ತುಪ್ಪವನ್ನು ಈ ಜಾಗದಲ್ಲಿ ಸವರುವುದರಿಂದ ದೇಹವು ಉತ್ತಮ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಪ್ರಚೋದಿಸುತ್ತದೆ.
ಆಯುರ್ವೇದದ ಪ್ರಕಾರ, ನಾಭಿಗೆ ಒಂದು ಹನಿ ತುಪ್ಪ ಸವರುವುದರಿಂದ ಅಜೀರ್ಣ, ಗ್ಯಾಸ್ಟ್ರಿಕ್, ಪಿತ್ತ-ವಾತದಂತಹ ಸಮಸ್ಯೆಗಳನ್ನು ನಿವಾರಿಸಲು ಕೂಡ ಪ್ರಯೋಜನಕಾರಿ ಆಗಿದೆ.
ಹೊಕ್ಕಳು ಭಾವನಾತ್ಮಕ ಯೋಗಕ್ಷೇಮದೊಂದಿಗೆ ಸಂಬಂಧ ಹೊಂದಿದ್ದು, ಖಿನ್ನತೆ, ಆತಂಕದಂತಹ ಸಂದರ್ಭದಲ್ಲಿ ಈ ಭಾಗಕ್ಕೆ ತುಪ್ಪ ಸವರುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.
ಅತಿಯಾಗಿ ಕೂದಲುದುರುತ್ತಿದ್ದರೆ ನಿಯಮಿತವಾಗಿ ಹೊಕ್ಕಳಿಗೆ ಹನಿ ತುಪ್ಪ ಸವರುವುದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗಿ, ಆರೋಗ್ಯಕರ ಕೂದಲನ್ನು ಹೊಂದಲು ಸಹಕಾರಿ ಆಗಿದೆ.
ನಿದ್ರಾಹೀನತೆ ಸಮಸ್ಯೆ ಹೊಂದಿರುವವರು ರಾತ್ರಿ ಮಲಗುವ ಮುನ್ನ 'ನಾಭಿ'ಗೆ ಒಂದು ಹನಿ ತುಪ್ಪ ಸವರಿ ಮಲಗಿದರೆ ಮನಸ್ಸಿನ ಆಶಾಂತತೆಯಿಂದ ಪರಿಹಾರ ದೊರೆತು ಉತ್ತಮ ನಿದ್ರೆ ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.