Amla Benefits: ಕೂದಲಿನ ಆರೋಗ್ಯ ಮತ್ತು ಸೌಂದರ್ಯಕ್ಕೆ ವರದಾನ ನೆಲ್ಲಿಕಾಯಿ
ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ನೆಲ್ಲಿಕಾಯಿ ಸಹಕಾರಿಯಾಗಿದೆ. ನಿಮ್ಮ ಕೂದಲಿಗೆ ನೆಲ್ಲಿಕಾಯಿಯನ್ನು ಬಳಸುವುದರಿಂದ ನೀವು ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ನೆಲ್ಲಿಕಾಯಿಯನ್ನು ಪ್ರಾಚೀನ ಕಾಲದಿಂದಲೂ ಕೂದಲ ಆರೋಗ್ಯಕ್ಕೆ ಬಳಸಿಕೊಂಡು ಬರಲಾಗುತ್ತಿದೆ.
ನೆಲ್ಲಿಕಾಯಿಯನ್ನು ಬಳಸುವುದರಿಂದ ಕೂದಲು ಉದುರುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ಪರಿಹರಿಸುತ್ತದೆ.
ನೆಲ್ಲಿಕಾಯಿಯು ಪೋಷಕಾಂಶ-ಸಮೃದ್ಧ ಸೂಪರ್‌ಫುಡ್ ಆಗಿದ್ದು, ಇದು ನಿಮ್ಮ ಕೂದಲನ್ನು ಉತ್ಕೃಷ್ಟಗೊಳಿಸಲು ಅಗತ್ಯವಾದ ಖನಿಜಗಳು ಮತ್ತು ವಿಟಮಿನ್‌ಗಳನ್ನು ಹೊಂದಿರುತ್ತದೆ.
ನೆಲ್ಲಿಕಾಯಿಯಲ್ಲಿರುವ ಅಮೈನೋ ಆಮ್ಲಗಳು ನಿಮ್ಮ ಕೂದಲನ್ನು ಬಲಪಡಿಸುತ್ತದೆ ಮತ್ತು ಹಾನಿಯನ್ನು ಸರಿಪಡಿಸುತ್ತದೆ.
ನೆಲ್ಲಿಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಅಧಿಕವಾಗಿವೆ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಬಹುದು.