Ampere Electric: ಹೊಚ್ಚ ಹೊಸ ಇವಿ ಸ್ಕೂಟರ್‌ ಬಿಡುಗಡೆ ಮಾಡಿದ ಆಂಪಿಯರ್!

Wed, 01 May 2024-8:11 am,

ಪ್ರೀಮಸ್ ಸ್ಕೂಟರ್‌ ಬಳಿಕ ನಂತರ ನೆಕ್ಸಸ್ ಇವಿ ಸ್ಕೂಟರ್ ಮಾದರಿಯು ಅತಿಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಿದೆ. ಇದರಲ್ಲಿ 3kWh LFP ಬ್ಯಾಟರಿ ಪ್ಯಾಕ್‌ನೊಂದಿಗೆ 4kWh ಸಾಮರ್ಥ್ಯದ ಮಿಡ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿದೆ. ಈ ಮೂಲಕ ಇದು ಪ್ರತಿ ಚಾರ್ಜ್‌ಗೆ 13KM ಮೈಲೇಜ್ ನೀಡುವ ಮೂಲಕ ಪ್ರತಿ ಗಂಟೆಗೆ 93KM ಟಾಪ್ ಸ್ಪೀಡ್ ಹೊಂದಿದೆ.

ಹೊಸ ನೆಕ್ಸಸ್ ಇವಿ ಸ್ಕೂಟರಿನಲ್ಲಿ ಬ್ಯಾಟರಿ ಚಾರ್ಜ್ ಮಾಡಲು ಗರಿಷ್ಠ 3.5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆ. ಇದು 2 ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಈ ಮೂಲಕ ಹೊಸ ಇವಿ ಸ್ಕೂಟರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಫೀಚರ್ಸ್ ನೀಡಲಾಗಿದೆ.

ಇದರಲ್ಲಿ 7 ಇಂಚಿನ ಕಲರ್ ಸ್ಕ್ರೀನ್ ಡಿಸ್‌ಪ್ಲೇ, ಸ್ವಿಚ್‌ಗೇರ್ ಹೊಂದಿರುವ ಹ್ಯಾಂಡಲ್ ಬಾರ್, ಫುಲ್ LED ಲೈಟಿಂಗ್ ಮತ್ತು ಬ್ಲೂಟೂಥ್ ಕನೆಕ್ವಿಟಿ ಹೊಂದಿದೆ. ಹೊಸ ಇವಿ ಸ್ಕೂಟರಿನಲ್ಲಿ 5 ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಇದರಲ್ಲಿ ಹಿಲ್‌ಹೋಲ್ಡ್ ಫೀಚರ್ಸ್ ಸಹ ಇದೆ.

ಹೊಸ ಇವಿ ಸ್ಕೂಟರಿನಲ್ಲಿ ಫ್ರಂಟ್ ಟೆಲಿಸ್ಕೊಪಿಕ್ ಸಸ್ಷೆಂಷನ್ ಮತ್ತು ಹಿಂಬದಿಯಲ್ಲಿ ಡ್ಯುಯಲ್ ಶಾಕ್‌ ಅಬ್ಸಾರ್ಬರ್‌ ನೀಡಲಾಗಿದೆ. ಇದರೊಂದಿಗೆ 12 ಇಂಚಿನ ವ್ಹೀಲ್ಸ್ ಜೋಡಣೆ ಮಾಡಿರುವ ಆಂಪಿಯರ್ ಕಂಪನಿಯು ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ನೀಡಿದೆ. 

ಹೊಸ ಇವಿ ಸ್ಕೂಟರ್ ಅಕ್ವಾ, ಲೂನಾರ್ ವೈಟ್, ಸ್ಟೀಲ್ ಗ್ರೇ ಮತ್ತು ಇಂಡಿಯನ್ ರೆಡ್ ಎನ್ನುವ 4 ಬಣ್ಣಗಳ ಆಯ್ಕೆ ಹೊಂದಿದೆ. ಇದು ಹಲವಾರು ಪ್ರೀಮಿಯಂ ಇವಿ ಸ್ಕೂಟರ್‌ಗಳಿಗೆ ಪರ್ಯಾಯ ಆಯ್ಕೆಯಾಗಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಹಲವಾರು ಇವಿ ಸ್ಕೂಟರ್‌ಗಳ ವಿರುದ್ಧ ಇದು ಸ್ಪರ್ಧಿಸಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link