`ಲವ್ ಯೂ..`- ಈಗಾಗಲೇ 3 ಮದುವೆಯಾಗಿ 4 ಮಕ್ಕಳ ತಂದೆಯಾಗಿರುವ ಸ್ಟಾರ್ ನಟನಿಗೆ ಪಬ್ಲಿಕ್‌ನಲ್ಲೇ ಪ್ರಪೋಸ್ ಮಾಡಿದ ಸಮಂತಾ: ವಿಡಿಯೋ ವೈರಲ್
ಸಮಂತಾ ರುತ್ ಪ್ರಭು ಸದ್ಯ ಟ್ರೆಂಡಿಂಗ್‌ನಲ್ಲಿದ್ದಾರೆ. ವಿಚ್ಛೇದನದ ಬಳಿಕ ಬಹಳಷ್ಟು ಹಿನ್ನಡೆಗಳನ್ನು ಅನುಭವಿಸಿದ್ದ ನಟಿ, ಇದೀಗ ಕೊಂಚ ಯಶಸ್ಸು ಕಾಣುತ್ತಿದ್ದಾರೆ. ಇತ್ತೀಚೆಗೆಯಷ್ಟೇ ಸಿಟಾಡೆಲ್-ಹನಿ ಬನಿ ವೆಬ್ ಸಿರೀಸ್‌ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.
ಇನ್ನು ಇತ್ತೀಚೆಗೆಯಷ್ಟೇ ಸಮಂತಾ ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆಯಾಗಿದ್ದಾರೆ. ನಟಿ ಶೋಭಿತಾ ಧೂಳಿಪಾಲರನ್ನು ವರಿಸಿರುವ ಅವರು, ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ಈ ಎಲ್ಲದರ ಮಧ್ಯೆ, ಸಮಂತಾ ಓರ್ವ ಹಿರಿಯ ನಟನಿಗೆ ಪ್ರಪೋಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಳೆಯ ವಿಡಿಯೋದಲ್ಲಿ ನಟ ನಿತಿನ್ ಅವರು, ಪುಟ್ಟ ಕುರ್ಚಿಯೊಂದರಲ್ಲಿ ಕುಳಿತಿದ್ದಾರೆ. ಅವರನ್ನು ಹಿಂದೆ ಮುಂದೆ ತೂಗುತ್ತಿರುವ ಸಮಂತಾ "ಪವರ್ ಸ್ಟಾರ್ ಲವ್ ಯೂ" ಎಂದು ಕ್ಯೂಟ್ ಆಗಿ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಅಲ್ಲಿದ್ದವರೂ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆಂದು ತಿಳಿದುಬರುತ್ತಿದೆ.
ಈ ನಡುವೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಕೆಲ ನೆಟ್ಟಿಗರು, "ನಮ್ಮ ಪವರ್ ಸ್ಟಾರ್ ಪವನ್ ಕಲ್ಯಾಣ್ ಮೇಲೆ ನಿಮ್ಮ ಕಣ್ಣು ಬಿದ್ದಿದೆಯಾ?" ಎಂದು ವ್ಯಂಗ್ಯಭರಿತ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು "ಅಲ್ಲಿರೋದು ಪವರ್ ಸ್ಟಾರ್..." ಎಂದು ಕೌಂಟರ್ ಕೊಡುತ್ತಿದ್ದಾರೆ.
ವಿಡಿಯೋ ಲಿಂಕ್ ಇಲ್ಲಿದೆ:
#Powerstar we love you 🤍how cuteeee😙@Samanthaprabhu2 @actor_nithiin pic.twitter.com/Psq3PIeqn2
— అజ్ఞతవాసి🦅🚁 (@TejaPawanist) December 7, 2024