ʼಪುಷ್ಪಾ ನಟಿʼ ಅನಸೂಯ ಮುಖಕ್ಕೆ ಗಂಭೀರ ಗಾಯ..! ನಿರೂಪಕಿ ಮೇಲೆ ನಡೀತಾ ಮಾರಣಾಂತಿಕ ಹಲ್ಲೆ

Fri, 09 Aug 2024-11:45 am,

ಆಂಕರ್ ಅನಸೂಯಾ ಗಂಭೀರ ಗಾಯಗೊಂಡಿದ್ದು ಈ ಕುರಿತ ಫೋಟೋಸ್‌ ಎಲ್ಲಡೆ ವೈರಲ್‌ ಆಗುತ್ತಿವೆ.. ನಟ ಅವರ ಮುಖದ ಮೇಲೆ ತೀವ್ರ ಗಾಯಗಳಾಗಿವೆ. ಈ ಚಿತ್ರಗಳನ್ನು ನೋಡಿದ ಎಲ್ಲರೂ ಬೆಚ್ಚಿಬಿದ್ದಿದ್ದು  ಏನಾಯಿತು..? ಅಂತ ಪ್ರಶ್ನೆ ಮಾಡುತ್ತಿದ್ದಾರೆ.. ಈ ಕುರಿತ ಸಂಪೂರ್ಣ ಸುದ್ದಿ ಇಲ್ಲಿದೆ..   

ಅನಸೂಯಾ ಅಭಿನಯದ ಇತ್ತೀಚಿನ ಚಿತ್ರ ಸಿಂಬಾ. ಈ ಸಿನಿಮಾದ ಶೂಟಿಂಗ್ ಟೈಮ್ ಸ್ಟಿಲ್ಸ್ ಇವು. ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅನಸೂಯಾ ತಮ್ಮ ಸಿನಿಮಾವನ್ನು ವಿನೂತನವಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ಚಿತ್ರ ಇಂದು (ಆಗಸ್ಟ್ 9) ಬಿಡುಗಡೆಯಾಗಿದೆ.  

ಸಂಪತ್ ನಂದಿ ಕಥೆಗೆ ಮುರಳಿ ಮನೋಹರ್ ನಿರ್ದೇಶನ ಮಾಡಿದ್ದಾರೆ. ಅನಸೂಯ, ಜಗಪತಿ ಬಾಬು, ಕಸ್ತೂರಿ, ದೇವಿ, ಶ್ರೀನಾಥ್ ಮತ್ತು ಕಬೀರ್ ಸಿಂಗ್ ಸೇರಿದಂತೆ ಹಲವಾರು ಸ್ಟಾರ್‌ ನಟ ನಟಿಯರು ಸಿನಿಮಾದಲ್ಲಿದ್ದಾರೆ. ಈ ಚಿತ್ರವನ್ನು ಸಂಪತ್ ನಂದಿ ಮತ್ತು ರಾಜೇಂದರ್ ಜಂಟಿಯಾಗಿ ನಿರ್ಮಿಸಿದ್ದಾರೆ.  

ಕಿರುತೆರೆಯಲ್ಲಿ ತಮ್ಮ ನಿರೂಪಣಟ ಮಾತಿನ ಶೈಲಿಯಿಂದ ಜನ ಮನಗೆದ್ದಿದ್ದ ಚೆಲುವೆ ಇದೀಗ ಬಿಗ್‌ ಸ್ಕ್ರೀನ್‌ ಮೇಲೆ ಮಿಂಚುತ್ತಿದ್ದಾರೆ. ಸ್ಟಾರ್‌ಗಳ ಜೊತೆ ನಟಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಇದರೊಂದಿಗೆ ತೆಲುಗು ಚಿತ್ರರಂಗದಲ್ಲಿ ಅನಸೂಯ ಟ್ರೆಂಡ್ ಓಡುತ್ತಿದೆ.    

ಸದ್ಯ ಅನಸೂಯಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್ ಎದಿರು ನಟಿಸುತ್ತಿದ್ದಾರೆ. ಇದಲ್ಲದೇ ಹಲವು ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಜಬರ್ದಸ್ತ್ ಸುಂದರಿಯ ಕಾಲ್ ಶೀಟ್ ಗಾಗಿ ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ.  

ಒಂದೆಡೆ ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್‌ ಮೂಲಕ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಮಾಡರ್ನ್ ಹಾಗೂ ಸೀರೆಯ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link