ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಅಂಗ್ಕ್ರಿಶ್ ರಘುವಂಶಿ ಬೆಳೆದಿದ್ದು ಈ ಭಾರತೀಯ ಕ್ರಿಕೆಟಿಗನ ಮನೆಯಲ್ಲಿ! ಅಂದು ಆಸರೆ ಕೊಟ್ಟ ಆ ಪುಣ್ಯಾತ್ಮ ಯಾರು?

Thu, 04 Apr 2024-2:05 pm,

ಅಂಗ್ಕ್ರಿಶ್ ರಘುವಂಶಿ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಅರ್ಧಶತಕವನ್ನು 25 ಎಸೆತಗಳಲ್ಲಿ ಬಾರಿಸಿದ್ದಾರೆ.  ತಮ್ಮ ಇನ್ನಿಂಗ್ಸ್‌’ನಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌’ಗಳು ಕೂಡ ಸೇರಿವೆ. ಈ ಸಂದರ್ಭದಲ್ಲಿ 200 ಸ್ಟ್ರೈಕ್ ರೇಟ್‌ ಆಗಿತ್ತು.

ತಂಡದ ಸಹ-ಮಾಲೀಕ ಶಾರುಖ್ ಖಾನ್ ಕೂಡ ಅಂಗ್ಕ್ರಿಶ್ ರಘುವಂಶಿ ಅವರ ಇನ್ನಿಂಗ್ಸ್ ನೋಡಿ ಸಂತಸದಿಂದ ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಐಪಿಎಲ್‌’ವರೆಗಿನ ಆಂಗ್‌ಕ್ರಿಶ್‌ನ ಪಯಣ ಸಾಕಷ್ಟು ರೋಚಕವಾಗಿದೆ. ದೆಹಲಿಯಿಂದ ಮುಂಬೈ, ಅಲ್ಲಿಂದ ಕೋಲ್ಕತ್ತಾಗೆ ಇವರ ಪಯಣ… ಹೌದು, ಅಂಗ್ಕ್ರಿಶ್ ರಘುವಂಶಿ ತಂದೆ ಅವನೀಶ್ ರಘುವಂಶಿ ಟೆನಿಸ್‌’ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರ ತಾಯಿ ಮಲ್ಲಿಕಾ ಕೂಡ ದೇಶಕ್ಕಾಗಿ ಬ್ಯಾಸ್ಕೆಟ್‌ಬಾಲ್ ಆಡಿದ್ದಾರೆ. ಇನ್ನು ಸಹೋದರ ಕ್ರಿಶ್‌’ಗೂ ಕ್ರೀಡೆಯ ಹುಚ್ಚಿದ್ದು, ತಂದೆಯ ಹಾದಿಯಲ್ಲೇ ಟೆನಿಸ್ ಆಯ್ಕೆ ಮಾಡಿಕೊಂಡಿದ್ದಾರೆ.

ದೆಹಲಿಯಲ್ಲಿ ಜನಿಸಿದ ಆಂಗ್‌ಕ್ರಿಶ್ ಮುಂಬೈನಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮಾಡಿದರು. 11 ನೇ ವಯಸ್ಸಿನಲ್ಲಿ ಮುಂಬೈ ತಲುಪಿದ ಅವರು ಭಾರತದ ಮಾಜಿ ಆಟಗಾರ ಅಭಿಷೇಕ್ ನಾಯರ್ ಅವರ ಜೊತೆಯೇ ವಾಸಿಸುತ್ತಾ, ಅವರಿಂದಲೇ ತರಬೇತಿ ಪಡೆದರು.

ಕೆಕೆಆರ್ 20 ಲಕ್ಷ ರೂ.ಗೆ ಆಂಗ್ಕ್ರಿಶ್ ಖರೀದಿಸಿದೆ. ಕೋಲ್ಕತ್ತಾ ತಂಡದಲ್ಲಿ ಅಭಿಷೇಕ್ ನಾಯರ್ ಬ್ಯಾಟಿಂಗ್ ಕೋಚ್ ಆಗಿದ್ದು, ರಿಂಕು ಸಿಂಗ್ ಅವರಂತಹ ಆಟಗಾರರನ್ನು ಬೆಳೆಸಿದ್ದು ಇವರೇ. ಈಗ ಭಾರತ ತಂಡಕ್ಕೆ ಆಂಗ್ಕ್ರಿಶ್ ಅನ್ನು ಸಿದ್ಧಪಡಿಸುತ್ತಿದ್ದಾರೆ.

2022 ರ ಅಂಡರ್-19 T20 ವಿಶ್ವಕಪ್‌’ನಲ್ಲಿ ಆಂಗ್‌ಕ್ರಿಶ್ ಅದ್ಭುತ ಬ್ಯಾಟಿಂಗ್ ಮಾಡಿದ್ದು, 287 ರನ್ ಗಳಿಸಿದ್ದರು. ಯಶ್ ಧುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಕೂಡ ಆಗಿತ್ತು. ರಘುವಂಶಿ 2023 ರಲ್ಲಿ ಮುಂಬೈ ಪರ ಲಿಸ್ಟ್ ಎ ಮತ್ತು ಟಿ20 ಚೊಚ್ಚಲ ಪಂದ್ಯವನ್ನಾಡಿದ್ದರು. ಸಿಕೆ ನಾಯುಡು ಟ್ರೋಫಿಯಲ್ಲಿ ಒಂಬತ್ತು ಪಂದ್ಯಗಳಲ್ಲಿ 765 ರನ್ ಗಳಿಸಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link