Anjeer For Diabetes: ಬೇಸಿಗೆಯಲ್ಲಿ ಅಂಜೂರವನ್ನು ಈ 3 ರೀತಿ ತಿಂದರೆ ಬ್ಲಡ್ ಶುಗರ್ ಹೆಚ್ಚಾಗುವುದೇ ಇಲ್ಲ!
ಅಂಜೂರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಬೆಳಿಗ್ಗೆ ಮತ್ತು ಸಂಜೆ ಅಂಜೂರದ ಹಣ್ಣುಗಳನ್ನು ಸ್ನ್ಯಾಕ್ಸ್ ರೀತಿ ತಿನ್ನಬಹುದು. ಅಂಜೂರದಲ್ಲಿ ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಕೆ ಮತ್ತು ವಿಟಮಿನ್ ಬಿ 6 ಸಮೃದ್ಧವಾಗಿದೆ.
ಬೇಸಿಗೆಯಲ್ಲಿ ನೀರಿನಲ್ಲಿ ನೆನೆಸಿದ ನಂತರವೇ ಅಂಜೂರವನ್ನು ಸೇವಿಸಿ. 4-5 ಅಂಜೂರದ ಹಣ್ಣುಗಳನ್ನು ತೆಗೆದುಕೊಂಡು ರಾತ್ರಿಯಿಡೀ ಒಂದು ಕಪ್ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ದೆಹವನ್ನು ತಂಪಾಗಿಸುತ್ತದೆ. ಅಲ್ಲದೇ ಮಧುಮೇಹ ಕೂಡ ನಿಯಂತ್ರಣದಲ್ಲಿರುತ್ತದೆ.
ಅಂಜೂರದ ಹಣ್ಣುಗಳನ್ನು ಹಾಲಿನಲ್ಲಿ ನೆನೆಸಿ ಸಹ ತಿನ್ನಬಹುದು. ಇದರಿಂದ ಅಂಜೂರದಲ್ಲಿನ ಪೋಷಕಾಂಶಗಳು ಅನೇಕ ಪಟ್ಟು ಹೆಚ್ಚಾಗುತ್ತವೆ. ಹಾಲಿನಲ್ಲಿ ನೆನೆಸಿದ ಅಂಜೂರ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಬೇಸಿಗೆಯಲ್ಲಿ ಅಂಜೂರದ ಹಣ್ಣುಗಳನ್ನು ತಿನ್ನಲು ಉತ್ತಮ ವಿಧಾನವೆಂದರೆ ಸ್ಮೂಥಿ ಮಾಡಿ ಸೇವಿಸುವುದು. 2-3 ಅಂಜೂರ ತೆಗೆದುಕೊಂಡು ಅವುಗಳನ್ನು ಸ್ಮೂಥಿಗೆ ಸೇರಿಸಿ, 2-3 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ. ಬಳಿಕ ಕುಡಿಯಿರಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.