ಅನ್ನಭಾಗ್ಯ ಯೋಜನೆ : ಡಿಬಿಟಿ ಮೂಲಕ ಹಣ ಜಮೆ ಬಗ್ಗೆ ಪರಿಶೀಲನೆ ಹೀಗೆ ಮಾಡಿಕೊಳ್ಳಿ...!

Fri, 14 Jul 2023-12:19 am,

ಹಣ ಜಮೆ ಆಗಿರದಿದ್ದಲ್ಲಿ ತಮ್ಮ ಪಡಿತರ ಚೀಟಿಯೊಂದಿಗೆ ಪಡಿತರ ವಿತರಣಾ ಕೇಂದ್ರಕ್ಕೆ ಹಾಗೂ ಖಾತೆ ಹೊಂದಿರುವ ಬ್ಯಾಂಕ್ ಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ದಲ್ಲಾಳಿ ಅಥವಾ ಮದ್ಯವರ್ತಿಗಳ ಮೊರೆ ಹೋಗದೇ ನೈರವಾಗಿ ಆಹಾರ ಇಲಾಖೆ ಅಧಿಕಾರಿಗಳನ್ಬು ಭೇಟಿ ಮಾಡಿ, ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಡಿಬಿಟಿ ಮೂಲಕ ಹಣ ಜಮೆ ಬಗ್ಗೆ ಪರಿಶೀಲನೆ: ಪಡಿತರ ಚೀಟಿದಾರ ಕುಟುಂಬ ಮುಖ್ಯಸ್ಥರ ಬ್ಯಾಂಕಖಾತೆಗೆ ನೇರ ವರ್ಗಾವಣೆ ಡಿಬಿಟಿ ಮೂಲಕ ಹಣ ಜಮೆ ಆದ ಬಗ್ಗೆ ಪರಿಶೀಲಿಸಲು ಪಡಿತರ ಚೀಟಿದಾರರು https://ahara.kar.nic.in/status_of_dbt.aspx ದಲ್ಲಿ ತಮ್ಮ ಕಾರ್ಡ್ ಸಂಖ್ಯೆ ನಮೂದಿಸಿ ತಿಳಿಯಬಹುದಾಗಿದೆ. 

ಸಾರ್ವಜನಿಕರಿಗೆ ಸೂಚನೆ: ಆಧಾರ್ ಲಿಂಕ್ ಆಗದೇ ಇರುವ ಸಕ್ರೀಯ ಬ್ಯಾಂಕ್‍ಖಾತೆ ಇಲ್ಲದೇ ಇರುವ ಮತ್ತು ಬ್ಯಾಂಕ್ ಇ-ಕೆವೈಸಿ ಆಗದೇ ಇರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಫಲಾನುಭವಿಗಳು ಜುಲೈ20, 2023ರೊಳಗಾಗಿ ಸರಿಪಡಿಸಿಕೊಳ್ಳಲು ಆಹಾರ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ಎಲ್ಲ ಪಡಿತರ ಅಂಗಡಿ ಮೂಲಕ ಫಲಾಬವಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಕ್ರಮವಹಿಸಿ, ತಮ್ಮ ಸಮೀಪದ ರಾಷ್ಟ್ರೀಕೃತ ಬ್ಯಾಂಕ್ ದಲ್ಲಿ ಅಥವಾ ಅಂಚೆಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕೆಲವರು ಬ್ಯಾಂಕ್ ಖಾತೆ ಮಾಡಿಸಿಕೊಂಡಿದ್ದರೂ ಆಧಾರ್ ಲಿಂಕ್ ಆಗದ ಕಾರಣ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಸಾಧ್ಯವಿಲ್ಲ ಎಂಬುದು ಆಹಾರ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಕಂಡು ಬಂದಿದೆ. ಬ್ಯಾಂಕ್ ಖಾತೆ ಇಲ್ಲದವರು ಹಾಗೂ ಬ್ಯಾಂಕ್ ಖಾತೆ ಇದ್ದರೂ ಆಧಾರ್ ಲಿಂಕ್ ಆಗದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿರುವ ಆಹಾರ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಬ್ಯಾಂಕ್‍ಖಾತೆ ಮಾಡಿಸುವಂತೆ ಸ್ಥಳೀಯ ಅಧಿಕಾರಿಗಳ ಹಾಗೂ ನ್ಯಾಯ ಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಸೂಚಿಸಲಾಗಿದೆ

ಬ್ಯಾಂಕ್ ಖಾತೆ ಮಾಡಿಸದ, ಆಧಾರ್ ಲಿಂಕ್ ಮಾಡಿಸದ ಹಾಗೂ ಇನ್ ಆಕ್ಟೀವ್ ಆಗಿರುವ (ಚಾಲನೆ ಇಲ್ಲದ) ಪಡಿತರ ಚೀಟಿದಾರರ ಮಾಹಿತಿಯನ್ನು ಆಯಾ ಪಡಿತರ ಅಂಗಡಿಗಳಿಗೆ ಕಳಿಸಲಾಗಿದ್ದು, ನೇರ ಹಣ ಜಮೆ ಆಗದವರು ಪರಿಶೀಲಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link