ಸಾಧಿಸುವ ಕನಸ್ಸು ಹೊತ್ತು ಬಂದಿದ್ದ ಯುವಕನಿಗೆ RCB ತಂಡದಲಿ ಸಿಕ್ಕಿತ್ತು ಅವಕಾಶ: ಬಡ ಕುಟುಂಬದ ಬಂದ ಈತ ಇಂದು ಬೆಂಗಳೂರು ತಂಡದ ಸ್ಟಾರ್‌ ಆಟಗಾರ

Sat, 19 Oct 2024-1:44 pm,

Anuj Rawat: ಅದೆಷ್ಟೋ ಮಂದಿ ಕ್ರಿಕೆಟ್‌ ಆಡುವ ಕನಸು ಹೊತ್ತು ಕ್ರೀಡೆಗೆ ಕಾಲಿಡುತ್ತಾರೆ ಆದರೆ ಅದೃಷ್ಟ ಎನ್ನುವುದು ಎಲ್ಲರ ಕೈ ಹಿಡಿಯುವುದಿಲ್ಲ. ಇನ್ನೂ ಕೆಲವೊಬ್ಬರಿಗೆ ಆಡುವ ಅವಕಾಶ ಸಿಕ್ಕರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲ. ತಮ್ಮ ದೇಶಕ್ಕಾಗಿ ಕ್ರಿಕೆಟ್‌ ಆಡಬೇಕು ತಮ್ಮ ರಾಷ್ಟ್ರದ ಕೀರ್ತಿಯನ್ನು ಬೆಳಗಬೇಕು ಎಂಬುದು ಎಲ್ಲರ ಕನಸ್ಸಾಗಿರುತ್ತದೆ. ಎಲ್ಲರಂತೆಯೇ ಕ್ರಿಕೆಟ್‌ ಆಡಿ ಒಳ್ಳೆ ಹೆಸರು ಗಳಿಸಬೇಕು ಎಂದು ಬಂದವರಲ್ಲಿ ಈ ಬಡ ಮನೆಯ ಯುವಕ ಕೂಡ ಒಬ್ಬ. ಸಾಧನೆಯ ಕನಸು ಕಟ್ಟಿ ಬಂದಿದ್ದ ಈತನಿಗೆ ದಾರಿ ಮಾಡಿ ಕೊಟ್ಟಿದ್ದು ಆರ್‌ಸಿಬಿ ತಂಡ.  

ಸದ್ಯ ನಡೆಯುತ್ತಿರುವ  ​ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಅನೂಜ್​ ರಾವತ್ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ, ಯುವ ಆಟಗಾರನ ಪ್ರದರ್ಶನ ನೋಡಿ ಅಭಿಮಾನಿಗಳು ವಾವ್‌ ಎಂದಿದ್ದಾರೆ.  

ಇತ್ತೀಚೆಗೆ ಈಸ್ಟ್ ಡೆಲ್ಲಿ ರೈಡರ್ಸ್ ಹಾ ಗೂ  ಪುರಾಣಿ ಡೆಲ್ಲಿ ನಡುವೆ ನಡೆದ ಡಿಪಿಎಲ್​ ಪಂದ್ಯ ನಡೆಯಿತು. ಈ 26 ನೇ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ಪರ ಓಪನರ್​ ಆಗಿ ಕಣಕ್ಕಿಳಿದ ಅನೂಜ್​ ರಾವತ್​​  ಮೊದಲ ಓವರ್​ನಿಂದಲೂ ಬಿರುಸಾದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆರಂಭಿಕ ಬ್ಯಾಟ್ಸ್‌ಮೆನ್‌ ಆಗಿ ಕ್ರೀಸ್‌ಗೆ ಎಂಟ್ರಿ ಕೊಟ್ಟಿದ್ದ ಅನೂಜ್‌ 20 ಓವರ್‌ನ ವರೆಗೂ ಫೀಲ್ಡ್‌ನಲ್ಲಿ ನಿಂತು ಬ್ಯಾಟ್‌ ಬೀಸಿ ತಮ್ಮ ಶಕ್ತಿ ಪ್ರದರ್ಶಿಸಿದರು.  

ಈಸ್ಟ್ ಡೆಲ್ಲಿ ರೈಡರ್ಸ್ ಪರ ಆಡಿದ ಅನೂಜ್‌ 66 ಬಾಲ್‌ಗಳನ್ನಾಡಿ 121 ರನ್‌ ಸಿಡಿಸಿ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದರು. ಆಡಿದ 66 ಬಾಲ್‌ಗಳಲ್ಲಿ 11 ಸಿಕ್ಸ್‌ ಹಾಗೂ ಒಂದಾದಮೇಲೊಂದು 6 ಫೋರ್‌ ಸಿಡಿಸಿ ಎದುರಾಳಿ ತಂಡದ ಬೌಲರ್‌ಗಳ ಬೆಂಡೆತ್ತಿದರು. ಇನ್ನೂ ಈ ಬಿರುಸಿನ ಬೌಲಿಂಗ್‌ ಪ್ರದರ್ಶಿಸುವ ಮೂಲಕ ತಂಡ ಯಾವುದೇ ವಿಕೆಟ್‌ ಕಳೆದುಕೊಳ್ಳದೆ 241 ರನ್‌ ಕಲೆಹಾಕುವಲ್ಲಿ ಶಕ್ತವಾಯಿತು.  

17ನೇ ಅಕ್ಟೋಬರ್‌ 1999 ರಲ್ಲಿ ಉತ್ತರಖಂಡ ಮೂಲದ ರೈತ ಕುಟುಂಬದಲ್ಲಿ ಜನಿಸಿದ ಅನುಜ್‌ ರಾವತ್‌, ತಾವು ಹತ್ತು ವಯಸ್ಸಿನವರಿರುವಾಗಲೇ ಕ್ರಿಕೆಟ್‌ ಆಡಲು ಪ್ರಾರಂಭಿಸಿದ್ದರು. ಇವರ ಕ್ರಿಕೆಟ್‌ ಕನಸ್ಸಿಗೆ ಕುಟಂಬದವರಷ್ಟೆ ಅಲ್ಲದೆ ಅವರ ಸ್ನೇಹಿತರು ಸಹ ಸಾಥ್‌ ಕೊಟ್ಟಿದ್ದರು.   

ಇನ್ನೂ ಕ್ರಿಕೆಟ್‌ಗೆ ಮೊದಲು ಎಂಟ್ರಿ ಕೊಟಾಗ ಅನೂಜ್‌ ಅಷ್ಟೇನು ಗುರುತಿಸಿಕೊಂಡಿರಲಿಲ್ಲ, ಆದರೆ ಆರ್‌ಸಿಬಿ ತಂಡ ಮಾತ್ರ ಅವರನ್ನು ಗುರುತಿಸಿ ಅವರಿಗೊಂದು ಚ್ಯಾನ್ಸ್‌ ಕೊಟ್ಟಿತ್ತು ಇಲ್ಲಿಂದಲೇ ಅವರ ಲಕ್‌ ಬದಲಾಗಿದ್ದು ಎಂದು ಅನೂಜ್‌ ಹೇಳಿಕೊಂಡಿದ್ದಾರೆ. ಇನ್ನೂ ಈ ಕುರಿತು ಮಾತನಾಡಿದ ಅನೂಜ್‌ " 2022 ರ ಮೆಗಾ ಹರಾಜು ಸಮಯದಲ್ಲಿ ಬೆಂಗಳೂರು ತಂಡ ನನ್ನನ್ನು ಖರೀದಿಸಿತ್ತು, ಇಲ್ಲಿಂದಲೇ ನನ್ನ ಕ್ರಿಕೆಟ್‌ ಜೀವನ ತಿರುವು ಪಡೆದುಕೊಂಡಿದ್ದು" ಎಂದು ಅನೂಜ್‌ ಹೇಳಿಕೊಂಡಿದ್ದಾರೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link