ಕ್ರಿಕೆಟಿಗ ವಿರಾಟ್‌ ಪತ್ನಿ ಅನುಷ್ಕಾ ಶರ್ಮಾ ಬಹಳ ವಿದ್ಯಾವಂತೆ! ಈಕೆ ಓದಿದ್ದೆಲ್ಲಾ ಕರ್ನಾಟಕದ ಈ ಪ್ರಖ್ಯಾತ ಶಾಲೆಯಲ್ಲಿ: ಆ ಸ್ಕೂಲ್‌ ಬೇರಾವುದು ಅಲ್ಲ...

Tue, 15 Oct 2024-1:48 pm,

ಸೆಲೆಬ್ರಿಟಿ ಲೋಕದ ಪವರ್‌ ಕಪಲ್‌ ಎಂದೇ ಖ್ಯಾತಿ ಗಳಿಸಿರುವ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಅನ್ಯೋನ್ಯತೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಇನ್ನು ಇವರಿಬ್ಬರಿಗೆ ಸಂಬಂಧಿಸಿದ ಕೆಲವು ವಿಚಾರಗಳ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.

ಈ ಮುದ್ದಾದ ಜೋಡಿಯ ವಿದ್ಯಾರ್ಹತೆ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ವಿಶಾಲ್ ಭಾರತಿ ಪಬ್ಲಿಕ್ ಶಾಲೆಯಲ್ಲಿ 12 ನೇ ತರಗತಿಯವರೆಗೆ ಓದಿದ್ದಾರೆ. ಆದರೆ ಅನುಷ್ಕಾ ಶರ್ಮಾ ಕಲಾ ವಿಭಾಗದಲ್ಲಿ ಬ್ಯಾಚುಲರ್ ಪದವಿ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.

 

ವಿರಾಟ್ ಕೊಹ್ಲಿ 12 ನೇ ತರಗತಿ ನಂತರ, ಅಂದರೆ 1998 ರಲ್ಲಿ ಪಶ್ಚಿಮ ದೆಹಲಿ ಕ್ರಿಕೆಟ್ ಅಕಾಡೆಮಿಗೆ ಸೇರಿದರು. ಇದಾದ ನಂತರ ಹಿಂತಿರುಗಿ ನೋಡಲೇ ಇಲ್ಲ. ಸಂಪೂರ್ಣವಾಗಿ ಕ್ರೀಡೆಯಲ್ಲಿ ನಿರತರಾದರು. ಕ್ರಿಕೆಟ್‌ ಕಾರಣದಿಂದಲೇ ವಿರಾಟ್ ಅಧ್ಯಯನದಲ್ಲಿ ಆಸಕ್ತಿ ಹೊಂದಿರಲಿಲ್ಲ.

 

ಆದರೆ ಅನುಷ್ಕಾ ಶರ್ಮಾ ಅಧ್ಯಯನದಲ್ಲಿ ತುಂಬಾ ಸ್ಮಾರ್ಟ್. ಪ್ರತಿ ತರಗತಿಯಲ್ಲೂ ಟಾಪರ್ ಆಗಿಯೇ ಇದ್ದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.

 

ಅನುಷ್ಕಾ ಶರ್ಮಾ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು ಬೆಂಗಳೂರಿನ ಪ್ರಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ. ಇದೇ ಕಾರಣದಿಂದ ಅವರಿಗೆ ಬೆಂಗಳೂರಿನ ಜೊತೆ ವಿಶೇಷ ಬಾಂಧವ್ಯ ಇರುವುದು.

 

ಇನ್ನು ಅನುಷ್ಕಾ ಹುಟ್ಟಿದ್ದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ. ಅವರ ತಂದೆ ಕುಮಾರ್ ಶರ್ಮಾ ಸೇನೆಯಲ್ಲಿ ಅಧಿಕಾರಿಯಾಗಿದ್ದು, ತಾಯಿ ಆಶಿಮಾ ಶರ್ಮಾ ಗೃಹಿಣಿಯಾಗಿದ್ದರು. ಅವರ ಸಹೋದರ ಕರ್ಣೇಶ್ ಶರ್ಮಾ ಮರ್ಚೆಂಟ್ ನೇವಿಯಲ್ಲಿದ್ದರು. ಈಗ ಸಿನಿ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ.

 

ಬಾಲ್ಯದಿಂದಲೇ ಶಿಸ್ತು-ಸಂಯಮವನ್ನು ಮೈಗೂಡಿಸಿಕೊಂಡಿದ್ದ ಅನುಷ್ಕಾ, ತನ್ನ ಬಾಲ್ಯವನ್ನು ಕಳೆದಿದ್ದು ಬೆಂಗಳೂರಿನಲ್ಲಿ. ಇವರ ಶಿಕ್ಷಣ ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಪೂರೈಸಿದ್ದಾರೆ.

 

ಅದಾದ ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಓದಿರುವ ಅವರು, ಅಲ್ಲಿಯೂ ಟಾಪರ್ ಆಗಿದ್ದರು ಎಂದು ತನ್ನ ಹಲವು ಸಂದರ್ಶನಗಳಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.   

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link