ಓಲ್ಡ್ ಏಜ್ನಲ್ಲಿ ತಂದೆಯಾದ ಬಾಲಿವುಡ್ ತಾರೆಯರು

Sat, 22 Aug 2020-1:27 pm,

ಕರೀನಾ ಕಪೂರ್ ಖಾನ್ ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ. ಸೈಫ್ ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ (ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್). ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ ಕರೀನಾರಿಗೆ ತೈಮೂರ್ ಎಂಬ ಕ್ಯೂಟ್ ಮಗನಿದ್ದು ಇದೀಗ ಅವರು ಎರಡನೇ ಮಗುವಿಗೆ ತಾಯಿಯಾಗುವ ಸಂತಸದಲ್ಲಿದ್ದಾರೆ. ಹೌದು ಈಗ ತಾನು ನಾಲ್ಕನೇ ಮಗುವಿನ ತಂದೆಯಾಗಲಿದ್ದೇನೆ ಎಂದು ಸೈಫ್ ಇತ್ತೀಚೆಗೆ ಮಾಹಿತಿ ನೀಡಿದರು.

ಸಂಜಯ್ 1987 ರಲ್ಲಿ ರಿಚಾ ಶರ್ಮಾ ಅವರನ್ನು ಮೊದಲು ವಿವಾಹವಾದರು ಮತ್ತು 1988 ರಲ್ಲಿ ಅವರು ಮಗಳು ತ್ರಿಶಾಲಾ ಜನಿಸಿದರು. ಸಂಜಯ್ ಅವರು 2008 ರಲ್ಲಿ ಮಾನ್ಯತಾ ಅವರೊಂದಿಗೆ ಮೂರನೇ ಮದುವೆಯನ್ನು ಆದರು, ನಂತರ ಸಂಜಯ್ ಅವರಿಗೆ 51 ವರ್ಷವಾಗಿದ್ದಾಗ 2010 ರಲ್ಲಿ ಅವಳಿ ಮಕ್ಕಳಿಗೆ ತಂದೆಯಾದರು.

ಶಾರುಖ್ ಖಾನ್ 3 ಮಕ್ಕಳ ತಂದೆಯಾಗಿದ್ದಾರೆ. ಶಾರುಖ್ ಮತ್ತು ಗೌರಿ 1997ರಲ್ಲಿ ಮಗ ಆರ್ಯನ್ ಮತ್ತು 2000ರಲ್ಲಿ ಸುಹಾನಾ ಜನಿಸಿದರು. ನಂತರ 2013 ರಲ್ಲಿ ಸರೊಗಸಿ ಮೂಲಕ, ಕಿಂಗ್ ಖಾನ್ ಮೂರನೇ ಮಗುವಿನ ಅಂದರೆ ಅಬ್ರಾಮ್ನ ತಂದೆಯಾದರು. ಆ ಸಮಯದಲ್ಲಿ ಶಾರುಖ್‌ಗೆ 48 ವರ್ಷ.

ಅಮೀರ್ ಅವರ ಮೊದಲ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ. 1993 ರಲ್ಲಿ ರೀನಾ  ಮತ್ತು 1997 ರಲ್ಲಿ ಮಗಳು ಇರಾ ಜನಿಸಿದರು. 2005ರಲ್ಲಿ ಅಮೀರ್ ಕಿರಣ್ ರಾವ್ ಅವರನ್ನು ವಿವಾಹವಾದರು ಮತ್ತು 2011ರಲ್ಲಿ ಅಮೀರ್ ತನ್ನ 48 ನೇ ವಯಸ್ಸಿನಲ್ಲಿ ಸರೊಗಸಿ ಮೂಲಕ ಮಗ ಆಜಾದ್ ಅವರ ತಂದೆಯಾದರು.

ಬಾಲಿವುಡ್‌ನ ಖ್ಯಾತ ನಟರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಅವರು 2002 ರಲ್ಲಿ ಮಗ ಆರವ್ ಅವರ ಪೋಷಕರಾದರು. ಮಗ ಹುಟ್ಟಿದ 10 ವರ್ಷಗಳ ನಂತರ 2012 ರಲ್ಲಿ ಅಕ್ಷಯ್-ಟ್ವಿಂಕಲ್ ಮಗಳ ಪೋಷಕರಾದರು. ಆ ಸಮಯದಲ್ಲಿ ಅಕ್ಷಯ್‌ಗೆ 45 ವರ್ಷ ವಯಸ್ಸಾಗಿತ್ತು.

1998 ರಲ್ಲಿ ಸೊಹೈಲ್ ಸೀಮಾರನ್ನು ಮದುವೆಯಾದರು, ನಂತರ 2000ರಲ್ಲಿ ಸೀಮಾ ತಮ್ಮ ಮಗ ನಿರ್ವಾಣ್ ಗೆ  ಜನ್ಮ ನೀಡಿದರು. ನಂತರ 2011 ರಲ್ಲಿ ಸೊಹೈಲ್ ಮತ್ತು ಸೀಮಾ ಇನ್ನೊಬ್ಬ ಮಗ ಯೋಹಾನ್ ಗೆ ಪೋಷಕರಾದರು. ಆ ಸಮಯದಲ್ಲಿ ಸೊಹೈಲ್ಗೆ 42 ವರ್ಷ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link