ದೇಹದ ಈ ಅಂಗಕ್ಕೆ ಎರಡೇ ಎರಡು ಹನಿ ಹರಳೆಣ್ಣೆ ಹಚ್ಚಿದ್ರೆ ಈ 5 ಸಮಸ್ಯೆಗಳಿಂದ ಸಿಗುತ್ತೆ ಮುಕ್ತಿ
ಹರಳೆಣ್ಣೆ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದಕ್ಕಾಗಿ ಬೇರೇನೂ ಮಾಡುವ ಅಗತ್ಯವಿಲ್ಲ. ಕೇವಲ ಎರಡೇ ಎರಡು ಹನಿ ಹರಳೆಣ್ಣೆಯನ್ನು ಹೊಕ್ಕಳಿಗೆ ಹಾಕುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ರಾತ್ರಿ ಮಲಗುವ ಮುನ್ನ 2 ಹನಿ ಹರಳೆಣ್ಣೆ ಹಚ್ಚಿ ಮಲಗುವುದರಿಂದ ಮಲಬದ್ದತೆ ಸಮಸ್ಯೆ ನಿವಾರಣೆಯಾಗುತ್ತದೆ.
ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರದಂತಹ ಸಮಯದಲ್ಲಿ ಒಂದೆರಡು ಹನಿ ಹರಳೆಣ್ಣೆಯನ್ನು ಹೊಕ್ಕಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಶೀಘ್ರವೇ ಪರಿಹಾರ ಸಿಗುತ್ತದೆ.
ಒಂದೆರಡು ಹನಿ ಹರಳೆಣ್ಣೆ ಹಚ್ಚಿ ಲಘು ಮಸಾಜ್ ಮಾಡಿದರೆ ಮುಟ್ಟಿನ ಸಮಯದಲ್ಲಿ ಕಾಡುವ ಅತಿಯಾದ ಹೊಟ್ಟೆ ನೋವಿನ ಸಮಸ್ಯೆಯಿಂದ ಶೀಘ್ರ ಪರಿಹಾರ ದೊರೆಯುತ್ತದೆ.
ಹೊಕ್ಕಳಿಗೆ ಹರಳೆಣ್ಣೆ ಹಚ್ಚುವುದರಿಂದ ಮೊಡವೆ ನಿವಾರಣೆಯಾಗಿ ಕಾಂತಿಯುತ ಸುಂದರ ತ್ವಚೆ ನಿಮ್ಮದಾಗಿಸಬಹುದು.
ನಿತ್ಯ ಹೊಕ್ಕಳಿಗೆ ಎರಡು ಹನಿ ಹರಳೆಣ್ಣೆ ಹಾಕಿದರೆ ಕೀಲು ನೋವಿನ ಸಮಸ್ಯೆಯಿಂದಲೂ ಪರಿಹಾರ ಸಿಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.