ಕೇವಲ 10 ನಿಮಿಷದಲ್ಲಿ ಉಚಿತವಾಗಿ ಪಾನ್ ಕಾರ್ಡ್ ಪಡೆಯಲು ಹೀಗೆ ಮಾಡಿ
ಆನ್‌ಲೈನ್ ನಲ್ಲಿ ಪ್ಯಾನ್ ಕಾರ್ಡ್ ಪಡೆಯಲು,ಮೊದಲು ಪ್ಯಾನ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಇದರ ನಂತರ, Instant PAN through Aadhaar ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಇದರ ನಂತರ, ಮುಂದಿನ ಹಂತದಲ್ಲಿ ನಿಮಗೆ 2 ಆಯ್ಕೆಗಳನ್ನು ನೀಡಲಾಗುವುದು. ಮೊದಲನೆಯದು Get New PAN ಮತ್ತು ಎರಡನೆಯದು Check StatusDownload PAN . ಇಲ್ಲಿ Get New PAN ಮೇಲೆ ಕ್ಲಿಕ್ ಮಾಡಬೇಕು.
ಇದರ ನಂತರ, ಮುಂದಿನ ಹಂತದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ. ನಂತರ ನಿಮ್ಮ ಫೋನ್‌ಗೆ ಬರುವ ಒಟಿಪಿಯನ್ನು ಸಬ್ಮಿಟ್ ಮಾಡಿ. ನಂತರ ಇಮೇಲ್ ಐಡಿಯನ್ನು ಭರ್ತಿ ಮಾಡಿ ಮತ್ತು ಅಗತ್ಯವಾದ ಮಾಹಿತಿಯನ್ನು ಸಲ್ಲಿಸಿ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ 10 ನಿಮಿಷಗಳ ನಂತರ ನೀವು ಪ್ಯಾನ್ ಸಂಖ್ಯೆಯನ್ನು ಪಡೆಯುತ್ತೀರಿ. ಅದನ್ನು ಪಿಡಿಎಫ್ ಫಾರ್ಮ್ಯಾಟ್ ನಲ್ಲಿ ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ, Check StatusDownload PAN ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಪ್ಯಾನ್ ಕಾರ್ಡ್ ಅನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿ, ಅದರ ಪ್ರಿಂಟ್ ತೆಗೆದುಕೊಳ್ಳಬಹುದು.
ನೆನಪಿಡಿ. ಯಾರ್ ಬಳಿ ಆಧಾರ್ ಕಾರ್ಡ್ ಇದೆಯೋ ಅವರು ಮಾತ್ರ ePan Cardಗೆ ಅರ್ಜಿ ಸಲ್ಲಿಸಬಹುದು. ನೀವು ಅಪ್ಲೈ ಮಾಡಿದ ಹತ್ತೇ ನಿಮಿಷಕ್ಕೆ ನಿಮಗೆ ಪ್ಯಾನ್ ಕಾರ್ಡ್ ನಂಬರ್ ಸಿಗುತ್ತದೆ. ePan Card ಗೆ ನೀವು ಆಧಾರ್ ಆಧಾರಿತ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಕೆಲಸ ಮಾಡಿದರೆ ಸಾಕು. ಪಿಡಿಎಫ್ ರೂಪದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುತ್ತದೆ.