ಆಲೂಗಡ್ಡೆ ರಸಕ್ಕೆ ಈ ಎರಡು ವಸ್ತು ಬೆರೆಸಿ ಹಚ್ಚಿದರೆ.. 10 ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು !
ಆಲೂಗಡ್ಡೆ ರಸವು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ನೆತ್ತಿಯನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಆಲೂಗಡ್ಡೆ ರಸ ಮತ್ತು ಮೊಸರಿನ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೇರುಗಳು ಗಟ್ಟಿಯಾಗುತ್ತವೆ.
ಆಲೂಗೆಡ್ಡೆ ರಸವನ್ನು ತೆಗೆದುಕೊಂಡು ಇದಕ್ಕೆ 2 ರಿಂದ ನ3 ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ಸ್ವಲ್ಪ ಕಾಫಿ ಪುಡಿ ಬೆರಸಿ ಚೆನ್ನಾಗಿ ಕಲಿಸಿ.
ಈ ಪೇಸ್ಟ್‌ನಿಂದ ಕೂದಲಿನ ಬುಡ ಮತ್ತು ನೆತ್ತಿಯನ್ನು ಮಸಾಜ್ ಮಾಡಿ. ಒಂದು ಗಂಟೆ ಇರಿಸಿ ನಂತರ ಸೌಮ್ಯವಾದ ಶಾಂಪೂ ಸಹಾಯದಿಂದ ತೊಳೆಯಿರಿ.
ಈ ಹೇರ್ ಮಾಸ್ಕ್ ಅನ್ನು ತಿಂಗಳಿಗೆ 3 ಬಾರಿ ಹಾಕುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಜೊತೆಗೆ ತಲೆಹೊಟ್ಟು ಸಹ ನಿವಾರಣೆಯಾಗುತ್ತದೆ.
ಆಲೂಗಡ್ಡೆ ವಿಟಮಿನ್ ಬಿ, ಸಿ, ಸತು ಮತ್ತು ಕಬ್ಬಿಣವನ್ನು ಹೊಂದಿರುತ್ತದೆ. ಇದು ಕೂದಲಿಗೆ ಪೋಷಣೆ ನೀಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.