White Hair: ತೆಂಗಿನೆಣ್ಣೆಯೊಂದಿಗೆ ಈ ಹಣ್ಣನ್ನು ಮಿಕ್ಸ್ ಮಾಡಿ ಹಚ್ಚಿ: ಬೆಳ್ಳಗಾದ ಕೂದಲು ಮರಳಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ!

Wed, 13 Mar 2024-3:45 pm,

ಅಕಾಲಿಕವಾಗಿ ಕಾಡುವ ಬಿಳಿಕೂದಲಿನ ಸಮಸ್ಯೆಯಿಂದ ಇತ್ತೀಚಿನ ದಿನಗಳಲ್ಲಿ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ರಾಸಾಯನಿಕ ಉತ್ಪನ್ನಗಳನ್ನು ಬಳಸುವುದರಿಂದ ಕೂದಲು ಬೇಗ ಬಿಳಿಯಾಗುತ್ತವೆ ಎಂದು ಹೇಳಲಾಗುತ್ತದೆ. ಹೀಗಿರುವಾಗ ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿ ಇಡಲು ವಾರಕ್ಕೆ 1-2 ಬಾರಿ ಬಳಸಿ ಈ ಹೇರ್ ಮಾಸ್ಕ್ ಅನ್ನು ಬಳಸಿ. ಇದನ್ನು ತಯಾರಿಸುವುದು ಕೂಡ ಸುಲಭ.

ನಾವಿಂದು ಬಾಳೆಹಣ್ಣಿನ ಹೇರ್ ಮಾಸ್ಕ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ಹೇರ್ ಮಾಸ್ಕ್ ಅನ್ನು ಅನೇಕ ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ. ಇನ್ನು ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಕೂದಲನ್ನು ಆರೋಗ್ಯಕರವಾಗಿ ಮಾಡುತ್ತದೆ.

ಬಾಳೆಹಣ್ಣು ತುಂಬಾ ಆರೋಗ್ಯಕರ ಹಣ್ಣು. ಪೋಷಕಾಂಶಗಳಿಂದ ತುಂಬಿದ್ದು, ವಿಟಮಿನ್ ಬಿ 6, ವಿಟಮಿನ್ ಸಿ, ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್ ಮತ್ತು ಇತರ ಅನೇಕ ಪೋಷಕಾಂಶಗಳು ಬಾಳೆಹಣ್ಣಿನಲ್ಲಿ ಕಂಡುಬರುತ್ತವೆ. ಇದು ಕೂದಲನ್ನು ರೇಷ್ಮೆಯಂತೆ ಮೃದುಗೊಳಿಸುತ್ತದೆ.

ಬಾಳೆಹಣ್ಣನ್ನು ಕೂದಲಿಗೆ ಹಚ್ಚುವುದರಿಂದ ಚರ್ಮ, ನೆತ್ತಿ ಮತ್ತು ಕೂದಲು ಆರೋಗ್ಯವಾಗಿರುತ್ತದೆ. ಬಾಳೆಹಣ್ಣಿನಲ್ಲಿ ಕಂಡುಬರುವ ಪೊಟ್ಯಾಸಿಯಮ್, ನೈಸರ್ಗಿಕ ತೈಲ, ಕಾರ್ಬೋಹೈಡ್ರೇಟ್ಗಳು ಮತ್ತು ವಿಟಮಿನ್ಗಳು ಕೂದಲನ್ನು ಸರಿಪಡಿಸಲು ಕೆಲಸ ಮಾಡುತ್ತದೆ.

ಈ ಹೇರ್ ಮಾಸ್ಕ್ ಮಾಡಲು, ವಿಟಮಿನ್ ಇ ಹೇರಳವಾಗಿರುವ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಮಾಯಿಶ್ಚರೈಸ್ ಮತ್ತು ಹಾನಿಯಾಗದಂತೆ ತಡೆಯುತ್ತದೆ. ಇದು ನೆತ್ತಿಯ ಸೋಂಕಿನ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಬಾಳೆಹಣ್ಣು ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ಹಚ್ಚುವುದರಿಂದ ಆರೋಗ್ಯಕರ ಕೂದಲು ಬೆಳವಣಿಗೆಯಾಗುತ್ತದೆ. ಜೊತೆಗೆ ಕೂದಲು ಸಿಲ್ಕಿಯಾಗುತ್ತದೆ.

ಹೇರ್ ಮಾಸ್ಕ್ ಮಾಡಲು, 1 ಮಾಗಿದ ಬಾಳೆಹಣ್ಣು ಮತ್ತು ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಒಂದು ಬಟ್ಟಲಿನಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದಕ್ಕೆ ತೆಂಗಿನ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ನಯವಾದ ಪೇಸ್ಟ್ ಆದಾಗ ಅದನ್ನು ಕೂದಲಿನ ಬೇರುಗಳಿಂದ ತುದಿವರೆಗೆ ಹಚ್ಚಿ. ಸುಮಾರು ಅರ್ಧ ಘಂಟೆಯವರೆಗೆ ಹಾಗೆ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳು ಮತ್ತು ವಿಷಯಗಳನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಇವುಗಳನ್ನು ಸಲಹೆಗಳಾಗಿ ಮಾತ್ರ ತೆಗೆದುಕೊಳ್ಳಿ. ಹಾಗೆಯೇ ಅನುಸರಿಸುವ ಮೊದಲು, ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link