ಭಾರತದಲ್ಲಿ 5G ನೆಟ್‌ವರ್ಕ್ ಯಾವಾಗ ಆರಂಭವಾಗಲಿದೆ, ಇಲ್ಲಿದೆ ಸಿಹಿ ಸುದ್ದಿ

Thu, 25 Feb 2021-9:40 am,

ಸ್ವೀಕರಿಸಿದ ಮಾಹಿತಿಯ ಪ್ರಕಾರ, ಏರ್‌ಟೆಲ್ (Airtel) ಈಗಾಗಲೇ 5 ಜಿ ಸೇವೆಯ ಪ್ರಯೋಗವನ್ನು ಮಾಡಿದೆ. ಕಂಪನಿಯು ಈ ಹೊಸ ತಂತ್ರಜ್ಞಾನವನ್ನು ಹೈದರಾಬಾದ್‌ನಲ್ಲಿ ಪ್ರಯತ್ನಿಸಿದೆ.

ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ (BSNL) ಮತ್ತು ವಿ ದೇಶದಲ್ಲಿ 5 ಜಿ ನೆಟ್‌ವರ್ಕ್‌ನ ಪ್ರಯೋಗಕ್ಕೆ ಅನುಮೋದನೆ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

ಕೇಂದ್ರ ಸರ್ಕಾರವು ಮೊದಲು 5 ಜಿ (5G) ನೆಟ್‌ವರ್ಕ್‌ನ ಇಂಟರ್ನೆಟ್ ಸೇವೆಗಳತ್ತ ಗಮನ ಹರಿಸಲಿದೆ ಎಂದು ಹೇಳಲಾಗುತ್ತಿದೆ. ಬಳಕೆದಾರರು ಮೊದಲಿಗಿಂತ ಹೆಚ್ಚಿನ ವೇಗದ ಇಂಟರ್ನೆಟ್ ವೇಗದ ಸೌಲಭ್ಯವನ್ನು ಪಡೆಯುತ್ತಾರೆ.

ಇದನ್ನೂ ಓದಿ - Redmi Note 10 Pro : ಶೀಘ್ರದಲ್ಲೇ ಲಾಂಚ್ ಆಗಲಿದೆ ಅಗ್ಗದ್ 5G ಸ್ಮಾರ್ಟ್‌ಫೋನ್

ವರದಿಯ ಪ್ರಕಾರ, ದೇಶಾದ್ಯಂತ 5 ಜಿ ನೆಟ್‌ವರ್ಕ್ ಅನ್ನು ಏಕಕಾಲದಲ್ಲಿ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಡಿಒಟಿ ಕಾರ್ಯದರ್ಶಿ ಸಂಸತ್ತಿಗೆ ತಿಳಿಸಿದ್ದಾರೆ. ಅದಕ್ಕಾಗಿಯೇ ಸರ್ಕಾರವು ಈ ಹೊಸ ತಂತ್ರಜ್ಞಾನವನ್ನು ಮೊದಲು ಕೆಲವು ಮೆಟ್ರೋ ನಗರಗಳಿಂದ ಪ್ರಾರಂಭಿಸುತ್ತದೆ. ನಂತರ ಈ ಸೇವೆಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು.

ಇದನ್ನೂ ಓದಿ - ಈ ಸರ್ಕಾರಿ ಯೋಜನೆಯಿಂದ ಸುಮಾರು 2 ಲಕ್ಷ ಜನರಿಗೆ ಸಿಗಲಿದೆ Employment

ಐಎಎನ್‌ಎಸ್ ವರದಿಯ ಪ್ರಕಾರ, ಕೇಂದ್ರ ಸರ್ಕಾರವು ದೇಶದಲ್ಲಿ 5 ಜಿ ನೆಟ್‌ವರ್ಕ್ ಲಾಂಚ್ ಬಗ್ಗೆ ನಿಖರ ಮಾಹಿತಿಯನ್ನು ನೀಡಿದೆ. ಈ ವರ್ಷ 5 ಜಿ ಬಿಡುಗಡೆ ಮಾಡಲಾಗುವುದು ಎಂದು ದೂರಸಂಪರ್ಕ ಇಲಾಖೆ (ಡಿಒಟಿ) ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ. 2021 ರ ಅಂತ್ಯದ ವೇಳೆಗೆ 5 ಜಿ ನೆಟ್‌ವರ್ಕ್ ಪಡೆಯಲು ಪ್ರಾರಂಭಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link