ನಿಮ್ಮ ಮಕ್ಕಳೂ ಕೂಡ ಓದಲು ಸೋಮಾರಿತನ ಮಾಡ್ತಾರ? ಅವರ ಏಕಾಗ್ರತೆ ಹೆಚ್ಚಿಸಲು ಇಲ್ಲಿವೆ 5 ಪರಿಣಾಮಕಾರಿ ಟಿಪ್ಸ್
ಮಕ್ಕಳಲ್ಲಿ ಸೋಮಾರಿತನ: ಸಾಮಾನ್ಯವಾಗಿ ಮಕ್ಕಳು ಸದಾ ಆಟದ ಗುಂಗಿನಲ್ಲಿ ಇರುತ್ತಾರೆ. ಹಾಗಾಗಿ ಅವರು ಓದುವುದರಲ್ಲಿ ಸೋಮಾರಿತನವನ್ನು ತೋರಬಹುದು. ಸೋಮಾರಿತನದಿಂದ ಏಕಾಗ್ರತೆ ಕಡಿಮೆಯಾಗುತ್ತದೆ, ಇದರಿಂದ ಓದಲು ಮನಸ್ಸಾಗುವುದಿಲ್ಲ. ಆದರೆ, ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಬಹುದು. ಅವುಗಳೆಂದರೆ...
ಮಕ್ಕಳು ಏಕಾಗ್ರತೆಯಿಂದ ಕುಳಿತು ಓದಲು ಅನುಕೂಲವಾಗುವಂತೆ ಗಿ ಶಾಂತ, ಸ್ವಚ್ಛ ಮತ್ತು ನಿಯಮಿತ ಸ್ಥಳವನ್ನು ಆಯ್ಕೆಮಾಡಿ. ಇಲ್ಲಿ ಮಕ್ಕಳಿಗೆ ಬೇರೆ ಯಾವುದೇ ಅಡೆತಡೆಗಳಿರಬಾರದು ಎಂಬುದನ್ನು ನೆನಪಿನಲ್ಲಿಡಿ.
ಮಕ್ಕಳನ್ನು ಓದಲು ಕೂರಿಸುವ ಮೊದಲು ಅವರಿಗೆ ಉತ್ತಮ ಭವಿಷ್ಯಕ್ಕಾಗಿ ಓದು ಎಷ್ಟು ಮುಖ್ಯ ಎಂಬುದರ ಕುರಿತು ಅವರನ್ನು ಪ್ರೇರೇಪಿಸಿ.
ಯಾವುದೇ ವಿಷಯವನ್ನು ಮಕ್ಕಳ ತಲೆಗೆ ಬಲವಂತವಾಗಿ ಹೇರುವ ಬದಲಿಗೆ, ಅವರಿಗೆ ಯಾವ ವಿಷಯ ಕಷ್ಟ ಎಂದೆನಿಸುತ್ತೋ ಅಂತಹ ವಿಷಯಗಳನ್ನು ಹೇಗೆ ಕಲಿಯಬೇಕು ಎಂಬುದರ ಸರಳ ಓದುವ ತಂತ್ರಗಳನ್ನು ಅವರಿಗೆ ಹೇಳಿಕೊಡಿ.
ದೀರ್ಘಕಾಲ ನಿರಂತರವಾಗಿ ಅಧ್ಯಯನ ಮಾಡುವುದರಿಂದ ಆಯಾಸ ಮತ್ತು ಸೋಮಾರಿತನ ಉಂಟಾಗುತ್ತದೆ. ಮಕ್ಕಳು ಓದುವುದು ಎಷ್ಟು ಮುಖ್ಯವೋ ಮೈಂಡ್ ಫ್ರೆಶ್ ಗಾಗಿ ನಿಯಮಿತವಾಗಿ ವಿರಾಮ ತೆಗೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ, ಮಕ್ಕಳಿಗೆ ಓದುವ ಮಧ್ಯದಲ್ಲಿ ವಿರಾಮ ತೆಗೆದುಕೊಳ್ಳಲು ಅವಕಾಶ ಕೊಡಿ.
ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರವೇ ಏಕಾಗ್ರತೆಯಿಂದ ಓದಲು ಸಾಧ್ಯ. ಹಾಗಾಗಿ ಅವರ ಡಯಟ್ ನಲ್ಲಿ ಸಾಕಷ್ಟು ಪೌಷ್ಟಿಕವಾದ ಆಹಾರವನ್ನು ನೀಡಿ. ಅಷ್ಟೇ ಅಲ್ಲದೆ, ನಿತ್ಯ ಸಾಕಷ್ಟು ನಿದ್ರೆ ಮಾಡುತ್ತಾರೆ ಎಂಬುದನ್ನೂ ಖಚಿತಪಡಿಸಿಕೊಳ್ಳಿ. ಆರೋಗ್ಯಕರ ದೇಹ ಮತ್ತು ಮನಸ್ಸು ಮಕ್ಕಳ ಏಕಾಗ್ರತೆಯನ್ನು ವೃದ್ಧಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.