ರೊಮ್ಯಾನ್ಸ್‌ಗೂ ವಯಸ್ಸಿಗೂ ಸಂಬಂಧವೇ ಇಲ್ಲ.. 50 ವರ್ಷದ ಸ್ಟಾರ್ ನಟಿಯ ಬೋಲ್ಡ್ ಹೇಳಿಕೆ..!

Fri, 14 Jun 2024-7:18 pm,

ಬಾಲಿವುಡ್ ಮಾತ್ರವಲ್ಲದೆ ಟಾಲಿವುಡ್ ನಲ್ಲೂ ಸ್ಟಾರ್ ಹೀರೋಯಿನ್ ಆಗಿ ದಿಗ್ಗಜರ ಜೊತೆ ಟಬು ನಟಿಸಿದ್ದಾರೆ. ಈಗಲೂ ಅದೇ ಲುಕ್‌, ಅಷ್ಟೇ ಸೌಂದರ್ಯವತಿ ಈಕೆ. ಸಧ್ಯ 50ರ ಹರೆಯದಲ್ಲಿ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಿರುವ ನಟಿ, ಹದಿನಾರರ ಹರೆಯದವರಂತೆ ಹೇಳಿಕೆ ನೀಡಿದ್ದಾರೆ.  

ಈ ಹಿಂದೆ ಟಾಲಿವುಡ್ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದ ನಾಯಕಿ ಟಬುಗೆ ಈಗಲೂ ಅದೇ ಕ್ರೇಜ್‌ ಇದೆ. ಇಂದಿಗೂ ಈ ಸುಂದರಿಯ ಗ್ಲಾಮರ್ ಸ್ವಲ್ಪವೂ ಕಡಿಮೆಯಾಗಿಲ್ಲ.   

ಈ 50 ವರ್ಷ ವಯಸ್ಸಿನ ಹೀರೋಯಿನ್ ಕಳೆದ 30 ವರ್ಷಗಳಲ್ಲಿ ಅಜಯ್ ದೇವಗನ್ ಅವರೊಂದಿಗೆ ಅನೇಕ ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಸಧ್ಯ ‘ಆರೋನ್ ಮೇ ಕ್ಯಾ ದಮ್ ಥಾ’ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ.   

ಟಬು ಮತ್ತು ಅಜಯ್ ದೇವಗನ್ 'ಆರೋನ್ ಮೇ ಕ್ಯಾ ದಮ್ ಥಾ' ಚಿತ್ರದ ಟ್ರೈಲರ್ ಲಾಂಚ್ ಸಂದರ್ಭದಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡರು. 50ರ ಹರೆಯದಲ್ಲಿ ರೊಮ್ಯಾನ್ಸ್ ಸಿನಿಮಾ ಮಾಡುವ ಬಗ್ಗೆ ಆಕೆಯ ಭಾವನೆಯ ಬಗ್ಗೆ ಕೇಳಿದಾಗ, ಟಬು ನೀಡಿದ ಉತ್ತರ ಕೇಳಿ ಎಲ್ಲರೂ ಶಾಕ್‌ ಆದರು.  

ರೊಮ್ಯಾನ್ಸ್ ಹದಿಹರೆಯದವರಿಗೆ ಸೀಮಿತ ಎನ್ನುವ ರೂಲ್ಸ್‌ ಎಲ್ಲೂ ಇಲ್ಲ ಎಂದು ಟಬು ಸ್ಪಷ್ಟಪಡಿಸಿದರು. ಪ್ರಣಯ, ಪ್ರೀತಿ, ಸಂಬಂಧಕ್ಕೆ ಯಾವುದೇ ಅಡೆತಡೆಗಳಿಲ್ಲ. ವಾಸ್ತವವಾಗಿ, ಚಿತ್ರವು ಪ್ರೀತಿ ಮತ್ತು ಪ್ರಣಯಕ್ಕಿಂತ ಹೆಚ್ಚಾಗಿ ಸಂಬಂಧವನ್ನು ಹೊಂದಿದೆ ಎಂದು ತಿಳಿಸಿದರು.   

ತೆಲುಗಿನಲ್ಲಿ ನಾಗಾರ್ಜುನ, ವೆಂಕಟೇಶ್ ಅವರಂತಹ ನಟರ ಜೊತೆ ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಧ್ಯ 50ರ ಹರೆಯದಲ್ಲೂ ಮದುವೆಯಾಗದೆ ಗ್ಲಾಮರ್ ಕಾಯ್ದುಕೊಂಡಿರುವ ನಟಿ, ‘ಆರೋನ್ ಮೇ ಕ್ಯಾ ದಮ್ ಥಾ’ ಸಿನಿಮಾದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link