ಕೊಹ್ಲಿ ಧೊನಿ ಅಲ್ಲ ಭಾರತದ ಶ್ರೀಮಂತ ಕ್ರಿಕೆಟಿಗ ಈತ!ಯಾರು ಗೊತ್ತಾ?

Tue, 27 Aug 2024-7:03 am,

ವಿರಾಟ್ ಕೊಹ್ಲಿ ಅಲ್ಲ, ಧೋನಿ ಕೂಡ ಅಲ್ಲ. ಭಾರತದ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ? ಇವರ ಆಸ್ತಿ ಎಷ್ಟು ಅಂತ ಗೊತ್ತಾದರೆ ನೀವು ಬೆಚ್ಚಿ ಬೀಳುತ್ತೀರ

ಕ್ರಿಕೆಟ್‌ನಲ್ಲಿ ದಿನಗಳು ಕಳೆದಂತೆ ಸಂಪತ್ತು ಕೂಡ ಹೆಚ್ಚಾಗುತ್ತದೆ. ಮೊದಲು ಕ್ರಿಕೆಟಿಗರ ಗಳಿಕೆ ತುಂಬಾ ಕಡಿಮೆ ಇತ್ತು. ಆದರೆ ಈಗ ಬಹುತೇಕ ಪ್ರತಿಯೊಬ್ಬ ಕ್ರಿಕೆಟಿಗರೂ ಕೋಟ್ಯಂತರ ರೂ ಸಂಭಾವನೆ ಪಡೆಯುತ್ತಿದ್ದಾರೆ. ವಿದೇಶಿ ಕ್ರಿಕೆಟಿಗರಿಗರ ಹೋಲಿಸಿದರೆ ಭಾರತೀಯ ಕ್ರಿಕೆಟಿಗರು ಹೆಚ್ಚು ಹಣ ಗಳಿಸುತ್ತಿದ್ದಾರೆ.   

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಹೊರಹೊಮ್ಮಿದೆ.  ಬಿಸಿಸಿಐ ಕ್ರಿಕೆಟಿಗರಿಗೆ ಅತ್ಯಧಿಕ ಮೊತ್ತ ನೀಡುತ್ತಿದ್ದು, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಭಾರತದ ಶ್ರೀಮಂತ ಕ್ರಿಕೆಟಿಗರು ಎಂದು ನೀವು ಭಾವಿಸಿರಬಹುದು ಆದರೆ ಭಾರತ ಶ್ರೀಮಂತ ಆಟಗಾರರು ಇಬರಿಬ್ಬರು ಅಲ್ಲ ಹೊರತಾಗಿ ನೀವು ಊಹೆ ಕೂಡ ಮಾಡದ ಆ ವ್ಯಕ್ತಿ.  

ಎಂಎಸ್ ಧೋನಿ, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗಿಂತ ಹಲವು ಪಟ್ಟು ಶ್ರೀಮಂತ, ಇಲ್ಲಿಯವರೆಗೆ ಅನೇಕ ಕ್ರಿಕೆಟಿಗರು ಇವರಿಬ್ಬರು ಶ್ರೀಮಂತ ಕ್ರಿಕೆಟಿಗರು ಎಂದು ಭಾವಿಸಿದ್ದರು. ಆದರೆ ವಾಸ್ತವ ಅದಲ್ಲ.  

ಭಾರತೀಯ ಕ್ರಿಕೆಟಿಗ ಮಹಾನ್ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಮಗ ಆರ್ಯಮಾನ್ ಬಿರ್ಲಾ. ನಿಜವಾದ ಆರ್ಯಮನ್ ಬಿರ್ಲಾ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ.  

ಕುಮಾರ್ ಮಂಗಳಂ ಬಿರ್ಲಾ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಅವರ ಮಗ ಆರ್ಯಮಾನ್ ಬಿರ್ಲಾ, ಉದ್ಯಮ ಅಷ್ಟೆ ಅಲ್ಲದೆ ಕ್ರಿಕೆಟ್‌ನ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡವರು. ತಮ್ಮ ಕಠಿಣ ಪರಿಶ್ರಮದಿಂದ ಕ್ರಿಕೆಟ್‌ನಲ್ಲಿ ದೊಡ್ಡ ಗುರಿಯನ್ನು ಸಾಧಿಸಿದ್ದಾರೆ.  

ಆರ್ಯಮಾನ್ ಬಿರ್ಲಾ ಅವರು ಮಧ್ಯಪ್ರದೇಶ ಪರ ಆಡುತ್ತಿರುವ ಪ್ರಥಮ ದರ್ಜೆ ಕ್ರಿಕೆಟಿಗ. ಆದರೆ ಈ ಶ್ರೀಮಂತ 2019 ರ ನಂತರ ಕ್ರಿಕೆಟ್‌ನಿಂದ ಹಠಾತ್ ಬ್ರೇಕ್ ತೆಗೆದುಕೊಂಡರು. ನಂತರ ಅವರು ಮೈದಾನಕ್ಕೆ ಮರಳಲಿಲ್ಲ.  

ಕೇವಲ 22 ವರ್ಷದವರಿದ್ದಾಗಲೇ ಆರ್ಯಮಾನ್ ಬಿರ್ಲಾ ಕ್ರಿಕೆಟ್‌ನಿಂದ ಬ್ರೇಕ್‌ ತೆಗೆದುಕೊಂಡರು. ಮಾನಸಿಕ ಆರೋಗ್ಯದಿಂದಾಗಿ ಆರ್ಯಮನ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ ಎಂದು ವರದಿಯಾಗಿದೆ  

ಮಾಧ್ಯಮ ವರದಿಗಳ ಪ್ರಕಾರ, ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ ಆರ್ಯಮನ್ ಬಿರ್ಲಾ ಸುಮಾರು 70,000 ಕೋಟಿ ಆಸ್ತಿಯ ಉತ್ತರಾಧಿಕಾರಿ ಎಂದು ಊಹಿಸಲಾಗಿದೆ.   

ಗಮನಾರ್ಹವಾಗಿ, ಆರ್ಯಮನ್ ಬಿರ್ಲಾ ಅವರು 2017 ರಲ್ಲಿ ಮಧ್ಯಪ್ರದೇಶಕ್ಕಾಗಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು.  

ಆರ್ಯಮನ್ ಬಿರ್ಲಾ ಅವರು ಪ್ರಥಮ ದರ್ಜೆ ಪಂದ್ಯಗಳಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 27.60 ಸರಾಸರಿಯಲ್ಲಿ 414 ರನ್ ಗಳಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link