ಕರ್ಕ ರಾಶಿಯಲ್ಲಿ ತ್ರಿಗ್ರಹಿ ಯೋಗ, ಬುಧ-ಸೂರ್ಯರ ಕೃಪೆಯಿಂದ 3 ರಾಶಿಗಳ ಜನರ ಭಾಗ್ಯ ಫಳಫಳ ಹೊಳೆಯಲಿದೆ!

Wed, 19 Jul 2023-1:49 pm,

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇತ್ತೀಚೆಗಷ್ಟೇ ಕರ್ಕ ರಾಶಿಯಲ್ಲಿ ಸೂರ್ಯನ ಗೋಚರ ನೆರವೇರಿದೆ. ಇದರಿಂದ ಅಲ್ಲಿ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಭಾರಿ ಧನ-ಸಂಪತ್ತು ಪ್ರಾಪ್ತಿಯಾಗಲಿದೆ.   

ಮೇಷ ರಾಶಿ: ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಈ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುತ್ತಲಿದೆ. ಇದರಿಂದ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ವಾಹನ, ಆಸ್ತಿ ಇತ್ಯಾದಿಗಳ ಖರೀದಿಗೆ ನೀವು ಮನಸ್ಸು ಮಾಡಬಹುದು. ತಂದೆ-ತಾಯಿಯರ ಜೊತೆಗಿನ ನಿಮ್ಮ ಬಾಂಧವ್ಯದಲ್ಲಿ ವೃದ್ಧಿಯಾಗಲಿದೆ. ತಾಯಿಯ ಪ್ರತಿ ನಿಮ್ಮ ಪ್ರೇಮಭಾವ ಹೆಚ್ಚಾಗಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಈ ಯೋಗದ ದೃಷ್ಟಿ ನಿಮ್ಮ ಗೋಚರ ಜಾತಕದ ದಶಮ ಭಾವದ ಮೇಲೆ ಇರಲಿದ್ದು, ಇದರಿಂದ ನಿಮ್ಮ ಕೆಲಸ ವ್ಯವಹಾರದಲ್ಲಿ ಅಪಾರ ಸಫಲತೆ ಸಿಗಲಿದೆ. ನಿರುದ್ಯೋಗಿಗಳಿಗೆ ನೌಕರಿ ಸಿಗುವ ಸಾಧ್ಯತೆ ಇದೆ.  

ಕನ್ಯಾ ರಾಶಿ: ತ್ರಿಗ್ರಹಿ ಯೋಗೈಂದ ಕನ್ಯಾ ರಾಶಿಯ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ನಿರ್ಮಾಣಗೊಳ್ಳುತ್ತೀದೆ. ಇದರಿಂದ ನಿಮ್ಮ ಆದಾಯದಲ್ಲಿ ವೃದ್ಧಿಯಾಗುವ ಸಾಧ್ಯತೆ ಇದೆ . ಆದಾಯದ ಹೊಸ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ದೃಷ್ಟಿಯಿಂದ ಈ ಯೋಗ ಸಾಕಷ್ಟು ಅನುಕೂಲಕರವಾಗಿದೆ. ಕೌಟುಂಬಿಕ ಆಧಾಯದಲ್ಲಿ ವೃದ್ಧಿಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಇದರಿಂದ ನಿಮಗೆ ಪದೋನ್ನತಿಯ ಭಾಗ್ಯ ಸಿಗುವ ಸಾಧ್ಯತೆ ಇದೆ. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸಮಾಚಾರ ಸಿಗುವ ಸಾಧ್ಯತೆ ಇದೆ. ಸ್ಟಾಕ್ ಮಾರ್ಕೆಟ್, ಲಾಟರಿ ವ್ಯವಹಾರಗಳಲ್ಲಿ ನಿಮಗೆ ಧನಲಾಭ ಉಂಟಾಗುವ ಸಾಧ್ಯತೆ ಇದೆ.   

ತುಲಾ ರಾಶಿ: ನಿಮ್ಮ ಜಾತಕದವರ ಪಾಲಿಗೆ ತ್ರಿಗ್ರಹಿ ಯೋಗ ನಿಮ್ಮ ವೃತ್ತಿ ಜೀವನ ಹಾಗೂ ವ್ಯಾಪಾರದ ದೃಷ್ಟಿಯಿಂದ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಲಿದೆ. ಹೀಗಾಗಿ ಈ ಸಮಯ ನಿಮ್ಮ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ನೌಕರಿಯ ಹುಡುಕಾಟ ನಡೆಸುತ್ತಿರುವವರಿಗೆ ನೌಕರಿಯ ಹೊಸ ಅವಕಾಶಗಳು ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಜೊತೆಗೆ ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲದ ರೂಪದಲ್ಲಿ ನಿಮಗೆ ಪದೋನ್ನತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರ ವರ್ಗದ ಜನರಿಗೆ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link