Astro Tips: ಮದುವೆಯಲ್ಲಿ ಅಡಚಣೆ ಉಂಟಾಗುತ್ತಿದೆಯೇ? ಈ ಜೋತಿಷ್ಯ ಉಪಾಯಗಳನ್ನು ಅನುಸರಿಸಿ
ಪ್ರತಿ ಬಾರಿಯೂ ಒಂದಲ್ಲ ಒಂದು ಕಾರಣಕ್ಕೆ ಮದುವೆಗೆ ವಿಳಂಬವಾಗುತ್ತದೆ. ನಿಮಗೂ ಕೂಡ ಮದುವೆಗೆ ಉತ್ತಮ ಸಂಬಂಧ ಕೂಡಿಬರುತ್ತಿಲ್ಲ ಎಂದಾದರೆ, ಜೋತಿಷ್ಯದಲ್ಲಿ ಸೂಚಿಸಲಾಗಿರುವ ಬೀಗದ ಉಪಾಯವನ್ನು ಅನುಸರಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾತ್ರಿ ಮಲಗುವ ಮುನ್ನ ಬೀಗವನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳಿ. ಮರುದಿನ, ಬೀಗ ಮತ್ತು ಅದರ ಕೀಲಿಯನ್ನು ಅಡ್ಡಹಾದಿಯಲ್ಲಿ ಇರಿಸಿ.
ಮದುವೆಯಲ್ಲಿ ವಿಳಂಬವಾಗುತ್ತಿದ್ದು ಮತ್ತು ನೀವು ಶೀಘ್ರದಲ್ಲೇ ಮದುವೆಯಾಗಲು ಬಯಸುತಿದ್ದರೆ, ಆಹಾರದಲ್ಲಿ ನೀವು ಹಳದಿ ಬಣ್ಣದ ಸೇವನೆಯನ್ನು ಹೆಚ್ಚಿಸಬೇಕು. ಇದಕ್ಕಾಗಿ ಅರಿಶಿನವನ್ನು ಬಳಸುವುದು ಉತ್ತಮ ಪರಿಹಾರವಾಗಿದೆ. ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಸಹ ಬಳಸಬಹುದು.
ಹಸುವಿಗೆ ಸೇವೆ ಸಲ್ಲಿಸುವುದು ಮತ್ತು ಅದಕ್ಕೆ ಆಹಾರವನ್ನು ನೀಡುವುದು ಹಿಂದೂ ಧರ್ಮದಲ್ಲಿ ಅತ್ಯಂತ ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದೆ. ಗುರುವಾರ ಹಸುವಿಗೆ ಬೇಳೆ, ಬೆಲ್ಲ, ಗೋಧಿ ಹಿಟ್ಟು ಮತ್ತು ಅರಿಶಿನ ಬೆರೆಸಿ ತಯಾರಿಸಿದ ಹಿಟ್ಟನ್ನು ತಿನ್ನಿಸಿ. ಇದರಿಂದ ನಿಮ್ಮ ಮದುವೆಯಲ್ಲಿ ಬರುತ್ತಿರುವ ಅಡೆತಡೆಗಳು ದೂರಾಗುತ್ತವೆ.
ಸಾಮಾನ್ಯವಾಗಿ ಪರ್ಫ್ಯೂಮ್ ಅಥವಾ ಸುಗಂಧವನ್ನು ಎಲ್ಲರೂ ಇಷ್ಟಪಡುತ್ತಾರೆ. ಹೀಗಿರುವಾಗ ಸ್ನಾನದ ನಂತರ ಪರಿಮಳ, ಸುಗಂಧ ಅಥವಾ ಪರ್ಫ್ಯೂಮ್ ಬಳಸಬೇಕು. ಈ ಪರಿಹಾರವನ್ನು ಮಾಡುವುದರಿಂದ ಮದುವೆಯಲ್ಲಿ ಇರುವ ಅಡೆತಡೆಗಳು ದೊರಾಗುತ್ತವೆ.
ಯಾವುದಾದರೊಂದು ಕನ್ಯೆಯ ವಿವಾಹಕ್ಕೆ ಭೇಟಿ ನೀಡಿ ಅಲ್ಲಿ ದಾನ ಮಾಡಿ ಮತ್ತು ಆ ಹುಡುಗಿ ಬಡ ಕುಟುಂಬದವಳಾಗಿದ್ದರೆ, ಖಂಡಿತವಾಗಿಯೂ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಅದೃಷ್ಟದ ಬಾಗಿಲು ಮದುವೆಗಾಗಿ ತೆರೆದುಕೊಳ್ಳುತ್ತದೆ.