Astro Tips: ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡುವುದರಿಂದ ಮನೆಗೆ ದರಿದ್ರ ಲಕ್ಷ್ಮಿ ಆಗಮನ, ಆರೋಗ್ಯಕ್ಕೂ ಒಳ್ಳೆಯದಲ್ಲ

Thu, 02 Nov 2023-6:27 am,

ನಮ್ಮ ಹಿಂದಿನವರು ಏನೇ ಮಾಡಿದರೂ ಅದಕ್ಕೊಂದು ಅರ್ಥ ಇರುತ್ತದೆ.  ಹಿಂದೂ ಧರ್ಮದಲ್ಲಿ ಪ್ರತಿ ಕೆಲಸಕ್ಕೂ ಸಮಯ, ವಾರ, ಮುಹೂರ್ತಗಳನ್ನು ನೋಡುವುದು ಪ್ರತೀತಿ. ಯಾವುದೇ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡುವುದರಿಂದ ಆ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತವೆ ಎಂಬುದು ನಂಬಿಕೆ. 

ಹಿಂದೂ ಧರ್ಮದಲ್ಲಿ ಸೂರ್ಯೋದಯದಂತೆ ಸೂರ್ಯಾಸ್ತಕ್ಕೂ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡುವುದನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. 

ಅಷ್ಟೇ ಅಲ್ಲ, ಸೂರ್ಯಾಸ್ತದ ಬಳಿಕ ಅಥವಾ ರಾತ್ರಿ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ಮನೆಗೆ ದಾರಿದ್ರ್ಯ ವಕ್ಕರಿಸುತ್ತದೆ. ಮಾತ್ರವಲ್ಲ, ಹಲವು ಆರೋಗ್ಯ ಸಮಸ್ಯೆಗಳು ಕೂಡ ಬಾಧಿಸಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಸೂರ್ಯಾಸ್ತದ ಬಳಿಕ ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ... 

ಹಿಂದೂ ಧರ್ಮದಲ್ಲಿ ಪೊರಕೆಯನ್ನು ಲಕ್ಷ್ಮಿಯ ಸ್ವರೂಪ ಎಂದು ನಂಬಲಾಗಿದೆ. ಲಕ್ಷ್ಮಿ ದೇವಿಗೆ ಸ್ವಚ್ಛತೆ ಇಷ್ಟವಾದರೂ ಸಹ ಲಕ್ಷ್ಮಿ ಆಗಮನದ ಸಮಯದಲ್ಲಿ ಎಂದರೆ ಸೂರ್ಯಾಸ್ತದ ಬಳಿಕ ಮುಸ್ಸಂಜೆ ವೇಳೆಯಲ್ಲಿ ಕಸ ಗುಡಿಸುವುದರಿಂದ ಅಂತಹ ಮನೆಗೆ ಅದೃಷ್ಟ ಲಕ್ಷ್ಮಿ ಬದಲಿಗೆ ದರಿದ್ರ ಲಕ್ಷ್ಮಿ ಪ್ರವೇಶಿಸುತ್ತಾಳೆ ಎಂಬ ನಂಬಿಕೆ ಇದೆ. 

ಹಿಂದೂ ಧರ್ಮದಲ್ಲಿ ತುಳಸಿಯನ್ನು ಪವಿತ್ರ ಸಸ್ಯ ಎನ್ನಲಾಗುತ್ತದೆ. ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನವನ್ನೂ ಸಹ ನೀಡಲಾಗಿದೆ. ಆದರೆ, ಸೂರ್ಯಾಸ್ತದ ಬಳಿಕ ತುಳಸಿ ಸಸ್ಯಕ್ಕೆ ನೀರು ಅರ್ಪಿಸಬಾರದು. ಇದರಿಂದ ಮನೆಯಲ್ಲಿ ತುಳಸಿ ಬಾಡುತ್ತದೆ. ಮಾತ್ರವಲ್ಲ, ಇದನ್ನು ಅಮಂಗಳಕರ ಎಂದು ಹೇಳಲಾಗುತ್ತದೆ. 

ಸಾಮಾನ್ಯವಾಗಿ ವಾರದ ಕೆಲವು ದಿನಗಳಲ್ಲಿ ಕೂದಲು ಮತ್ತು ಉಗುರುಗಳನ್ನು ಕತ್ತರಿಸುವುದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಪುರಾಣಗಳ ಪ್ರಕಾರ, ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು. ಅಷ್ಟೇ ಅಲ್ಲ, ಮುಸ್ಸಂಜೆ ವೇಳೆ, ರಾತ್ರಿ ಸಮಯದಲ್ಲಿಯೂ ಈ ಕೆಲಸ ಮಾಡುವುದನ್ನು ಅಶುಭ ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಬಹುದು ಎನ್ನಲಾಗುತ್ತದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ರಾತ್ರಿ ಸಮಯದಲ್ಲಿ ಮೊಸರು ಸೇವನೆಯನ್ನು ನಿಷಿದ್ಧ ಎನ್ನಲಾಗುತ್ತದೆ. ರಾತ್ರಿ ವೇಳೆ ಮೊಸರು ಸೇವನೆಯಿಂದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಬಹುದು ಎಂದು ಹೇಳಲಾಗುತ್ತದೆ. ಗಮನಾರ್ಹವಾಗಿ, ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ ವೈಜ್ಞಾನಿಕ ದೃಷ್ಟಿಯಿಂದಲೂ ರಾತ್ರಿ ವೇಳೆ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. 

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link