Astro Tips: ಬೆಡ್ ರೂಂನಲ್ಲಿ ಈ ಫೋಟೋ ನೇತು ಹಾಕಿದ್ರೆ ಸುಖ-ಸಮೃದ್ಧಿ ಸಿಗಲಿದೆ!
ನಿಮ್ಮ ಮನೆಯ ಬೆಡ್ ರೂಂನಲ್ಲಿ ರಾಧಾ-ಕೃಷ್ಣರ ಫೋಟೋ ನೇತುಹಾಕುವುದರಿಂದ ಮನೆಯಲ್ಲಿ ಪ್ರೀತಿ, ಸಮೃದ್ಧಿ ಸದಾ ಕಾಲ ನೆಲೆಸುವಂತೆ ಮಾಡುತ್ತದೆ ಎಂದು ನಂಬಲಾಗಿದೆ.
ವಿಶೇಷವಾಗಿ ಗಂಡ-ಹೆಂಡತಿ ನಡುವೆ ಪ್ರೀತಿ-ಪ್ರೇಮ ಸಂಬಂಧ ಸದಾಕಾಲ ಇರಬೇಕೆಂದರೆ ಬೆಡ್ ರೂಂನಲ್ಲಿ ರಾಧಾ-ಕೃಷ್ಣರ ಫೋಟೋವನ್ನು ಕಡ್ಡಾಯವಾಗಿ ನೇತು ಹಾಕಬೇಕಂತೆ.
ಪುರಾಣಗಳ ಪ್ರಕಾರ ಕೃಷ್ಣ-ರಾಧೆಯರದ್ದು ಪರಿಶುದ್ಧ ಪ್ರೀತಿ. ಜೋಡಿ ಎಂದರೆ ಹೀಗಿರಬೇಕು ಅನ್ನೋವಷ್ಟರ ಮಟ್ಟಿಗೆ ಅನುರೂಪವಾದ ಜೋಡಿ. ರಾಧಾ-ಕೃಷ್ಣರ ಪ್ರೀತಿಗೆ ಕೊನೆಯೇ ಇಲ್ಲ. ಹೀಗಾಗಿ ನಮ್ಮ ಜೀವನದಲ್ಲೂ ಸಂಗಾತಿಯೊಂದಿಗಿನ ಪ್ರೀತಿ ಅಷ್ಟೇ ಉತ್ಕಟವಾಗಿರಬೇಕೆಂಬ ಕಾರಣಕ್ಕೆ ಇವರ ಫೋಟೋವನ್ನು ಬೆಡ್ ರೂಂನಲ್ಲಿ ನೇತು ಹಾಕಬಹುದು.
ವಿಶೇಷವಾಗಿ ಮನೆಯ ಬೆಡ್ ರೂಂನ ಈಶಾನ್ಯ ದಿಕ್ಕಿಗೆ ರಾಧಾ-ಕೃಷ್ಣರ ಫೋಟೋ ಹಾಕಬೇಕು. ಇದಲ್ಲದೆ ಬಾಲ ಕೃಷ್ಣನ ಫೋಟೋ ನೇತು ಹಾಕಿದರೂ ಒಳ್ಳೆಯದಂತೆ.
ಆದರೆ ಬೆಡ್ ರೂಂನಲ್ಲಿ ಯಾವುದೇ ಕಾರಣಕ್ಕೂ ಮಹಾಭಾರತಕ್ಕೆ ಸಂಬಂಧಿಸಿದ ಫೋಟೋಗಳನ್ನು ನೇತು ಹಾಕಬಾರದು ಎಂದು ಹೇಳಲಾಗಿದೆ..