Astro Tips: ಮನೆಯಲ್ಲಿ ಬೆಕ್ಕು ಮರಿಗಳಿಗೆ ಜನ್ಮ ನೀಡಿದ್ರೆ ಶುಭವೋ ಅಶುಭವೋ?
ಮನೆಯಲ್ಲಿ ಬೆಕ್ಕು ಸಾಕುವ ವಿಚಾರದಲ್ಲಿ ಜನರು ಎರಡು ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರು ಪ್ರಕಾರ ಬೆಕ್ಕು ಸಾಕುವುದು, ಬೆಳೆಸುವುದು ಮಂಗಳಕರವಾಗಿದೆ. ಇನ್ನು ಕೆಲವರ ಪ್ರಕಾರ ಮನೆಯಲ್ಲಿ ಬೆಕ್ಕು ಇರುವುದು ನಕಾರಾತ್ಮಕತೆ ಮತ್ತು ಅಶುಭವನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.
ಮನೆಯಲ್ಲಿ ಬೆಕ್ಕು ಸಾಕುವುದು ಶುಭವೋ ಅಶುಭವೋ? ಇದರ ಬಗ್ಗೆ ಜ್ಯೋತಿಷಿಗಳು ಏನು ಹೇಳುತ್ತಾರೆ? ಅನ್ನೋದರ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯ. ಜ್ಯೋತಿಷ್ಯದ ಪ್ರಕಾರ, ಮನೆಯಲ್ಲಿ ಬೆಕ್ಕುಗಳು ಎಲ್ಲಿ ವಾಸಿಸುತ್ತಾವೋ ಅಲ್ಲಿ ನಕಾರಾತ್ಮಕ ಶಕ್ತಿಗಳು ಸಕ್ರಿಯವಾಗಿರುತ್ತವಂತೆ.
ಬಂಗಾರ ಬಣ್ಣದ ಬೆಕ್ಕು ಮನೆಯಲ್ಲಿರುವುದು ಶುಭವೆಂದು ಹೇಳಲಾಗುತ್ತದೆ. ಈ ಕಂದು ಅಥವಾ ಸುವರ್ಣ ಬಣ್ಣದ ಬೆಕ್ಕುಗಳು ನಿಮ್ಮ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಬಹುದು. ಅಷ್ಟೇ ಅಲ್ಲ ನಿಮ್ಮ ಬಾಕಿ ಕೆಲಸಗಳು ಸಹ ಯಶಸ್ವಿಯಾಗುತ್ತದೆ ಮತ್ತು ನೀವು ಕಷ್ಟಪಟ್ಟು ದುಡಿದ ಹಣ ಪಡೆಯಲು ಸಾಧ್ಯವಾಗುತ್ತದೆ.
ನಿಮ್ಮ ಮನೆಯಲ್ಲಿ ಬೆಕ್ಕು ಮರಿಗಳಿಗೆ ಜನ್ಮ ನೀಡಿದರೆ, ಮನೆಯ ಮುಖ್ಯಸ್ಥರಿಗೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮರಿಗಳ ಜನನದ ನಂತರ 90 ದಿನಗಳಲ್ಲಿ ಕುಟುಂಬದ ಸದಸ್ಯರು ಪ್ರತಿ ಕ್ಷೇತ್ರದಲ್ಲೂ ಪ್ರಗತಿ, ಯಶಸ್ಸನ್ನು ಸಾಧಿಸುತ್ತಾರೆ ಎಂದು ಹೇಳಲಾಗಿದೆ.
ಇದ್ದಕ್ಕಿದ್ದಂತೆ ಎಲ್ಲಿಂದಲೋ ಕಪ್ಪು ಬೆಕ್ಕು ನಿಮ್ಮ ಮನೆಗೆ ಬಂದು ಅಳಲು ಪ್ರಾರಂಭಿಸಿದರೆ, ಅದು ಅಶುಭದ ಸಂಕೇತ. ಬೆಕ್ಕುಗಳ ಕಿರಿಚುವುದು ಮತ್ತು ಅಳುವುದು ಅಹಿತಕರ ಘಟನೆಯನ್ನು ಸೂಚಿಸುತ್ತದೆ. ರಾತ್ರಿ ವೇಳೆ ಬೆಕ್ಕು ಕೂಗುವುದು ಕೆಟ್ಟ ಸುದ್ದಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಬೆಕ್ಕಿನ ಮರಿಗಳ ಜನನದಿಂದ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸಲು ಸಾಧ್ಯವಿಲ್ಲವೆಂದು ಹೇಳಲಾಗುತ್ತದೆ.