Astro Tips: ದುರದೃಷ್ಟವನ್ನೂ ಅದೃಷ್ಟವಾಗಿ ಬದಲಾಯಿಸುತ್ತೆ ತುಳಸಿ ಎಲೆ
ತುಳಸಿ ಒಂದು ಪವಿತ್ರ ಸಸ್ಯ. ಹಿಂದೂ ಧರ್ಮದಲ್ಲಿ ಇದಕ್ಕೆ ಪೂಜನೀಯ ಸ್ಥಾನ ನೀಡಲಾಗಿದೆ. ತುಳಸಿ ಸಸ್ಯದ ಪ್ರತಿಯೊಂದು ಭಾಗವೂ ಪವಿತ್ರ ಮಹತ್ವವನ್ನು ಹೊಂದಿವೆ. ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿರುವ ಈ ಸಸ್ಯ, ವ್ಯಕ್ತಿಯ ಅದೃಷ್ಟವನ್ನು ಸಹ ಬದಲಾಯಿಸಬಲ್ಲದು ಎಂದು ನಿಮಗೆ ತಿಳಿದಿದೆಯೇ?
ಹೌದು, ಜ್ಯೋತಿಷ್ಯ ಶಾಸ್ತ್ರದಲ್ಲಿ ತುಳಸಿ ಎಲೆಗಳ ಹಲವು ಪರಿಹಾರಗಳನ್ನು ಸೂಚಿಸಲಾಗಿದ್ದು, ಅವುಗಳಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಅದು ವ್ಯಕ್ತಿಯ ಮಲಗಿರುವ ಅದೃಷ್ಟವನ್ನೂ ಎಚ್ಚರಗೊಳಿಸಬಲ್ಲದು.
ಯಾವುದೇ ಓರ್ವ ವ್ಯಕ್ತಿ ತುಳಸಿ ಎಲೆಗಳಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ಸುಖ-ಸಂತೋಷದ ಜೊತೆಗೆ ಹಣಕಾಸಿನ ಮುಗ್ಗಟ್ಟಿನಿಂದ ಪರಿಹಾರ ಪಡೆಯಬಹುದು. ದುರದೃಷ್ಟವನ್ನೂ ಅದೃಷ್ಟವಾಗಿ ಬದಲಾಯಿಸಬಲ್ಲದು ಎಂದು ಹೇಳಲಾಗುತ್ತದೆ. ಅಂತಹ ಕೆಲವು ಪರಿಹಾರಗಳು ಯಾವುವೆಂದರೆ...
ನೀವು ದೀರ್ಘಾವಧಿಯಿಂದ ಯಾವುದೋ ಒಂದು ಕೆಲಸವನ್ನು ಪೂರ್ಣಗೊಳಿಸುವಲ್ಲಿ ಅಡಚಣೆಯನ್ನು ಎದುರಿಸುತ್ತಿದ್ದರೆ, ಇದನ್ನು ತಪ್ಪಿಸಲು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಿ. ಈ ಪೂಜೆಯಲ್ಲಿ ತಪ್ಪದೆ ತುಳಸಿ ಎಲೆಗಳು ಹಾಗೂ ಸಕ್ಕರೆಯಿಂದ ತಯಾರಿಸಿದ ಸಿಹಿ ತಿನಿಸುಗಳನ್ನು ಅರ್ಪಿಸಿ.
ನೀವು ನಿಮ್ಮ ಜೀವನದಲ್ಲಿ, ನಿಮ್ಮ ಮನೆಯಲ್ಲಿ ಸುಖ-ಸಂತೋಷ ನೆಮ್ಮದಿಯನ್ನು ಬಯಸಿದರೆ, ಇದಕ್ಕಾಗಿ ಪ್ರತಿ ದಿನ ಮುಂಜಾನೆ ಸ್ನಾನ ಮಾಡಿದ ನಂತರ ತುಳಸಿ ಮಾತೆಗೆ ಭಕ್ತಿಯಿಂದ ನೀರೆರೆದು ಪೂಜಿಸಿ. ಈ ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ಕೂಡ ಸ್ಮರಿಸಿ.
ದುರಾದೃಷ್ಟ ಎಂಬುದು ನಿಮ್ಮನ್ನು ಬೆಂಬಿಡದೆ ಕಾಡುತ್ತಿದ್ದರೆ, ಕೆಲಸ ಕಾರ್ಯಗಳಲ್ಲಿ ಏಳ್ಗೆ ಕುಂಠಿತಗೊಂಡಿದ್ದರೆ, ಗುರುವಾರದಂದು ವಿಷ್ಣುವಿಗೆ ತುಳಸಿ ಎಲೆಗಳೊಂದಿಗೆ ಹಲಸಿ ಬಣ್ಣದ ಸಿಹಿಯನ್ನು ನೇವೇದ್ಯವಾಗಿ ಅರ್ಪಿಸಿ. ಇದು ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ನಿಮ್ಮ ನಿಮ್ಮ ದುರಾದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸುತ್ತದೆ.
ನೀವು ಸುಖ ದಾಂಪತ್ಯ ಜೀವನವನ್ನು ಬಯಸಿದರೆ ಇದಕ್ಕಾಗಿ, ಬೆಳಗಿನ ಪೂಜೆಯಲ್ಲಿ ವಿಷ್ಣುವಿಗೆ ಶ್ರೀಗಂಧದ ತಿಲಕವನ್ನು ಹಚ್ಚಿ ಮತ್ತು ಲಕ್ಷ್ಮಿ ದೇವಿಗೆ ಕುಂಕುಮವನ್ನು ಹಚ್ಚಿ. ತುಳಸಿ ದಳಗಳನ್ನು ನೇವೇದ್ಯವಾಗಿ ಅರ್ಪಿಸಿ. ಇದರಿಂದ ದಾಂಪತ್ಯದಲ್ಲಿ ಉಂಟಾಗಿರುವ ವಿರಸ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.