Astro Tips: ಮನೆಯಲ್ಲಿ ಯಾವ ರೀತಿಯ ಧೂಪ ಬೆಳಗಿದರೆ ಏನು ಲಾಭ ಸಿಗುತ್ತದೆ?

Tue, 20 Jun 2023-9:28 pm,

1. ಶ್ರೀಗಂಧದ ಧೂಪ- ವ್ಯಕ್ತಿಯ ಪ್ರಗತಿಯಲ್ಲಿ ಅಡೆತಡೆಗಳು ಇದ್ದು,  ಅನಾವಶ್ಯಕವಾಗಿ ಹಣ ವ್ಯಯವಾಗುತ್ತಿದೆ ಎಂದಾದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಶ್ರೀಗಂಧದ ಪುಡಿಯ ಧೂಪ ಬೆಳಗಬೇಕು. ಇದಕ್ಕಾಗಿ ಶ್ರೀಗಂಧ, ಏಲಕ್ಕಿ ಮತ್ತು ಕರ್ಪೂರವನ್ನು ಒಟ್ಟಿಗೆ ಸುಡಬೇಕು. ಮತ್ತು ಮನೆಯಲ್ಲಿ ಅದರ ಹೊಗೆಯನ್ನು ನೀಡುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.  

2. ಗುಗುಳ ಧೂಪ- ಜೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗೆ ವಿವಿಧ ಪದಾರ್ಥಗಳ ಧೂಪ ಬೆಳಗಲು ಸಲಹೆ ನೀಡಲಾಗಿದೆ. ದಿನನಿತ್ಯ ಮನೆಯಲ್ಲಿ ಸದಸ್ಯರ ಮಧ್ಯೆ ಕ್ಲೇಶಗಳು ಉಂಟಾಗುತ್ತಿದ್ದರೆ, ಗುಗ್ಗುಳದ ಧೂಪ ಬೆಳಗುವುದು ತುಂಬಾ ಲಾಭದಾಯಕವಾಗಿದೆ. ಇದರ ಧೂಪದಿಂದ ದೃಷ್ಟಿ ದೋಷ ಮುಕ್ತಿ ಸಿಗುತ್ತದೆ ಮತ್ತು ಯಾವುದೇ ರೀತಿಯ ಆಕಸ್ಮಿಕ ಘಟನೆಗಳು ಸಂಭವಿಸುವುದಿಲ್ಲ. ಇದಕ್ಕಾಗಿ ಕೆಂಡದ ಮೇಲೆ ಗುಗ್ಗುಳ ಹಾಕಿ ಆದರೆ ಧೂಪವನ್ನು ಮನೆಯ ಮೂಲೆಮೂಲೆಯಲ್ಲಿ ಬೆಳಗಬೇಕು.  

3. ಕರ್ಪೂರ ಹಾಗೂ ಲವಂಗದ ಧೂಪ- ಯಾವುದೇ ಓರ್ವ ಜಾತಕದ ವ್ಯಕ್ತಿ ಧನಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತಿಲ್ಲ ಎಂದಾದರೆ, ಅವರು ತಮ್ಮ ಮನೆಯಲ್ಲಿ ಕರ್ಪೂರ ಹಾಗೂ ಲವಂಗದ ಧೂಪ ಬೆಳಗಬೇಕು. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ಲಭಿಸುತ್ತದೆ ಹಾಗೂ ಮನೆಯ ಶ್ರೆಯೋಭಿವೃದ್ಧಿಗೆ ಇದು ಕಾರಣವಾಗುತ್ತದೆ.  

4. ಗಾಯತ್ರಿ ಕೇಸರಿಯ ಧೂಪ- ಯಾವುದೇ ಓರ್ವ ವ್ಯಕ್ತಿಗೆ ತನ್ನ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಅಥವಾ ಕೆಟ್ಟ ಶಕ್ತಿಗಳ ಪ್ರಭಾವದ ಅನುಭವಕ್ಕೆ ಬರುತ್ತಿದ್ದರೆ, ಇದಕ್ಕಾಗಿ ಕೇಸರಿ ತುಂಬಾ ಉಪಯೋಗಕಾರಿಯಾಗಿದೆ. ಇದಕ್ಕಾಗಿ ಗಾಯತ್ರಿ ಕೇಸರಿಯಲ್ಲಿ ಗುಗ್ಗುಳ ಬೆರೆಸಿ ಮನೆ ತುಂಬಾ ಧೂಪ ಬೆಳಗಬೇಕು. ಸತತ 21 ದಿನಗಳವರೆಗೆ ಈ ಉಪಾಯವನ್ನು ಅನುಸರಿಸುವುದರಿಂದ ಸಾಕಷ್ಟು ಲಾಭ ಸಿಗುತ್ತದೆ.  

5. ಹಳದಿ ಸಾಸಿವೆ ಧೂಪ- ಒಂದು ವೇಳೆ ಮನೆಯಲ್ಲಿ ಉಂಟಾಗಿರುವ ಕಲಹ-ಕ್ಲೇಶಗಳು ನಿಲ್ಲುವ ಮಾತೇ ಎತ್ತುತ್ತಿಲ್ಲ ಎಂದಾದಲ್ಲಿ ಮತ್ತು ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆಯ ಲಕ್ಷಣಗಳೇ ಕಂಡು ಬರುತ್ತಿಲ್ಲ ಎಂದಾದರೆ, ಹಳದಿ ಸಾಸಿವೆಯ ಈ ಉಪಾಯ ತುಂಬಾ ಪರಿಣಾಮಕಾರಿಯಾಗಿದೆ. ಹಳದಿ ಸಾಸಿವೆಯ ಧೂಪ ಮನೆಯ ವಾತಾವರಣವನ್ನು ಶಾಂತಗೊಳಿಸುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link